ಪೊಳಲಿ: ದೀನಬಂಧು ಸಮಾಜಸೇವಾ ಸಂಸ್ಥೆ ಬಡಗ ಬೆಳ್ಳೂರು ಪೊಳಲಿ ಇದರ 5 ನೇ ವರ್ಷಾಚರಣೆ ಬೆಳ್ಳೂರು ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನಡೆಯಿತು.ಈ ವೇಳೆ ಲೋಕಕಲ್ಯಾಣಾರ್ಥವಾಗಿ ಮತ್ತು ಆರೋಗ್ಯ ವೃದ್ಧಿ ಗಾಗಿ ಧನ್ವಂತರಿ ಮಹಾಯಾಗ ಮತ್ತು ಅಂಬುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮವು ನಡೆಯಿತು.
ಪೊಳಲಿ ರಾಮಕೃಷ್ಣ ತಪೋವನದ ಪರಮಪೂಜ್ಯ ಶ್ರೀ ವಿವೇಕ ಚೈತನ್ಯಾನಂದ ಸ್ವಾಮಿಜಿ ಆಶೀರ್ವಚನ ನೀಡಿದರು.ಈ ಸಂದರ್ಭ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು,ಬಿಜೆಪಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ದೇವಪ್ಪ ಪೂಜಾರಿ, ಶ್ರೀ ವಿಜಯ ಸುವರ್ಣ ಗುರೂಜಿ ಶ್ರೀ ಕೊರಗಜ್ಜ ಸನ್ನಿಧಿ, ಮಾದುಕೋಡಿ ಮತ್ತುಶ್ರೀ ವಿಜಯ್ ಸೌಮ್ಯಶ್ರೀ ಕೊರಗಜ್ಜ ಸನ್ನಿಧಿ, ಬೆಂಜನಪದವು, ಡಾ| ಕೃಷ್ಣಮೂರ್ತಿ,ಪ್ರಸಾದ್ ಕುಮಾರ್ ಪಿ .ನ್ಯಾಯವಾದಿ ಹಾಗೂ ಅಧ್ಯಕ್ಷರು, ವಿಶ್ವ ಹಿಂದೂ ಪರಿಷತ್ ಬಂಟ್ವಾಳ ಪ್ರಖಂಡ, ಬಡಗಬೆಳ್ಳೂರು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಆಳ್ವ ಗುಂಡಾಲ,ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಹಾಸ್ ಪುಂಚಮೆ, ಕಾಂತಪ್ಪ ಶೆಟ್ಟಿ ಕೊಡ್ಮಾನ್ ರಾಷ್ಟಿಯ ಸ್ವಯಂಸೇವಕ ಸಂಘ ಪುತ್ತೂರು ಜಿಲ್ಲಾ ಸಂಘ ,ಭುವನೇಶ್ ಪಚಿನಡ್ಕ ಮಾಲಕರು, ಶುಭಲಕ್ಷ್ಮಿ ಗ್ರೂಪ್ಸ್,ಉಮೇಶ್ ಸಾಲ್ಯಾನ್ ಉದ್ಯಮಿ ಬೆಂಜನಪದವು,ಮೋಹನ್ ಪೂಜಾರಿ ಕೆ. Asi,igp ಕಛೇರಿ, ಮಂಗಳೂರು,ರೋಶನ್ ಪುಂಚಮೆ ಅಧ್ಯಕ್ಷರು, ಬಿಲ್ಲವ ಸಮಾಜ ಸೇವಾ ಸಂಘ, ಕರಿಯಂಗಳ,ಶರಣ್ ಕುಮಾರ್ MRPL,ರಾಜೇಶ್ ಪೂಜಾರಿ ಸಾಣೂರು ಬಡಗಬೆಳ್ಳೂರು, ಪ್ರಣಾಮ್ ಸಿವಿಲ್ ಇಂಜಿನಿಯರ್, ಬಡಕಬೈಲ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ದಿನೇಶ್ ವರಕೋಡಿ ಕಾರ್ಯಕ್ರಮ ನಿರ್ವಹಿಸಿದರು. ಶಶಿಕಿರಣ್ ಸ್ವಾಗತಿಸಿದರು.
Kshetra Samachara
05/05/2022 11:32 am