ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುದರ ಜೊತೆಗೆ ದೇಶದ ಬಗ್ಗೆ ಅಭಿಮಾನವೂ ಬರುವಂತೆ ಬೆಳೆಸಬೇಕು

ಬಜಪೆ:ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್,ಪಡುಪೆರಾರ ಗ್ರಾಮ ಪಂಚಾಯತ್,ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ,ಶಿಶು ಅಭಿವೃದ್ದಿ ಯೋಜನೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಮತ್ತು ಎಂ ಅರ್ ಪಿ ಎಲ್ ಸಿಎಸ್ ಅರ್ ಅನುದಾನದಲ್ಲಿ ಒಟ್ಟು 10 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಕೊರ ಕಂಬಳ ಅಂಗನವಾಡಿ ಕೇಂದ್ರದ ನೂತನ ಕಟ್ಟಡದ ಉದ್ಘಾಟನೆಯನ್ನು ಮಂಗಳೂರು ಉತ್ತರ ಶಾಸಕ ಡಾ.ವೈ ಭರತ್ ಶೆಟ್ಟಿ ಅವರು ನೆರವೇರಿಸಿ ಮಾತನಾಡಿದರು.

ಈ ಭಾಗದಲ್ಲಿ ಕಳೆದ ಹಲವು ವರ್ಷಗಳಿಂದ ಅಂಗವಾಡಿಯ ನೂತನ ಕಟ್ಟಡದ ಬೇಡಿಕೆ ಇದ್ದು,ಇದೀಗ ಸಾಕಾರಗೊಂಡಿದೆ.ಈಗಾಗಲೇ ಮೂರು ಅಂಗನವಾಡಿ ಕಟ್ಟಡಗಳು ನಿರ್ಮಾಣವಾಗಿದೆ ಎಂದರು. ಮಕ್ಕಳು ದೇವರಿಗೆ ಸಮಾನ ,ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುದರ ಜೊತೆಗೆ ದೇಶದ ಬಗ್ಗೆ ಅಭಿಮಾನವೂ ಬರುವಂತೆ ಬೆಳೆಸಬೇಕು ಎಂದು ಅವರು ಹೇಳಿದರು.

ಈ ಸಂದರ್ಭ MRPL CSR ಮ್ಯಾನೇಜರ್ ಶ್ರೀಶಾ, ಪಡುಪೆರಾರ ಗ್ರಾಮ ಪಂಚಾಯತ್ ಅಧ್ಯಕ್ಷೆ ಅಮಿತಾ ಮೋಹನ್ ಶೆಟ್ಟಿ, ಉಪಾಧ್ಯಕ್ಷೆ ಸೇಸಮ್ಮ, ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಶೈಲಾ ಕೆ ಕಾರಿಗಿ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಎನ್ ಜಿ ನಾಗರಾಜು,ತುಳು ಸಾಹಿತ್ಯ ಆಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್, ಬಜಪೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪೂರ್ಣಕಲಾ ವೈ.ಕೆ,ಬಜಪೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಂಕರ್ ನಾಗ್ ,ಬಾಲ ವಿಕಾಸ ಸಮಿತಿ ಅಧ್ಯಕ್ಷೆ ನಿಶಾ,ಬಜಪೆ ವಲಯದ ಮೇಲ್ವಿಚಾರಕಿ ಸುಜಾತ,ನಿವೃತ್ತ ಮೇಲ್ವಿಚಾರಕಿ ಚಂದ್ರಾವತಿ,ಅಂಗನವಾಡಿ ಕಾರ್ಯಕರ್ತೆ ಶೋಭಾ,ಸಹಾಯಕಿ ಸುಶ್ಮಿತಾ,ಪಂಚಾಯತ್ ಸದಸ್ಯರುಗಳಾದ ನೂರ್ ಅಹ್ಮದ್, ವಿನೋದ್ ,ಜಯಂತ್ ,ಕಾಶಿನಾಥ್ ,ಅನಿಲ್ ಕುಮಾರ್ ,ರಾಜೇಶ್ ಸುಂಕದಕಟ್ಟೆ,ಪಕ್ಷದ ಸ್ಥಳೀಯ ಮುಖಂಡರು, ಗಣ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.ಗಣೇಶ್ ಪಾಕಾಜೆ ಕಾರ್ಯಕ್ರಮ ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

05/04/2022 04:47 pm

Cinque Terre

2.16 K

Cinque Terre

0

ಸಂಬಂಧಿತ ಸುದ್ದಿ