ಸುರತ್ಕಲ್ : ಕೃಷ್ಣಾಪುರದಲ್ಲಿರುವ ಶ್ರೀ ವಿಶ್ವನಾಥ ದೇವಸ್ಥಾನದ ಸಮೀಪ ಸಣ್ಣ ನೀರಾವರಿ ಇಲಾಖೆಯಿಂದ 1.50 ಕೋಟಿ ರೂ.ಅನುದಾನದಲ್ಲಿ ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿವೈಅವರು ಇಂದು ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಅವರು ಪ್ರತೀ ಕಡೆಗಳಲ್ಲಿಯೂ ಕೆರೆ,ಬಾವಿ ನಿರ್ಮಾಣದಿಂದ ಅಂತರ್ಜಲ ವೃದ್ಧಿಯಾಗುತ್ತದೆ. ಹೀಗಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಜಲ ಸಂಪತ್ತು ಉಳಿಸಲು ಪೂರಕ ಕ್ರಮಕ್ಕೆ ಮುಂದಾಗಿದೆ. ಸ್ಥಳೀಯ ಧಾರ್ಮಿಕ ಕಾರ್ಯಕ್ರಮ ಸಂದರ್ಭ ದೇವರ ಜಳಕ, ಗಣೇಶೋತ್ಸವ ಮತ್ತಿತರ ಶುಭ ಸಮಾರಂಭಗಳಿಗೂ ಸದ್ಬಳಕೆಯಾಗಲಿ ಎಂದು ಶಾಸಕರು ಹಾರೈಸಿದರು.
ಪ್ರಶಾಂತ್ ಮೂಡಾಯಿಕೋಡಿ, ಬಿಜೆಪಿ ಉತ್ತರಮಂಡಲ ಅಧ್ಯಕ್ಷತಿಲಕ್ ರಾಜ್ ಕೃಷ್ಣಾಪುರ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲಕ್ಷ್ಮೀಶ ದೇವಾಡಿಗ, ಯುವಮೋರ್ಚಾ ಅಧ್ಯಕ್ಷ ಭರತ್‌ರಾಜ್ ಕೃಷ್ಣಾಪುರ, ಪಣಂಬೂರು ಕಾವರ ಮನೆ ಮಂಜುಕಾವಸುಧಾಕರ ಕಾಮತ್, ನೀರಾವರಿ ಇಲಾಖೆಯ ಎಂಜಿನಿಯರ್ ಗೋಕುಲ್‌ದಾಸ್, ಬಿಜೆಪಿ ಮುಖಂಡರು, ದೇವಸ್ಥಾನದ ಪ್ರಧಾನ ಅರ್ಚಕರು, ಸಮಿತಿ ಸದಸ್ಯರು, ಊರಿನ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು.
Kshetra Samachara
04/04/2022 08:44 pm