ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿ.ಮೂಡ ಸರ್ಕಾರಿ ಹಿ.ಪ್ರಾ. ಶಾಲೆಗೆ ಬಂಟ್ವಾಳ ಜೇಸಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ಕೊಡುಗೆ

ಬಂಟ್ವಾಳ: ಬಿ.ಸಿ.ರೋಡಿನ ಅಜ್ಜಿಬೆಟ್ಟುವಿನಲ್ಲಿರುವ ಬಿ.ಮೂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಜೇಸಿ ಬಂಟ್ವಾಳ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಲಾಗಿದೆ. ಶುಕ್ರವಾರ ಬೆಳಗ್ಗೆ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಜೇಸಿ ಭಾರತದ ರಾಷ್ಟ್ರೀಯ ಉಪಾಧ್ಯಕ್ಷ ಕೆ.ಕೆ.ಪೊನ್ನುರಾಜ್ ಅವರು ಘಟಕವನ್ನು ಶಾಲೆಗೆ ಹಸ್ತಾಂತರಿಸಿದರು.

ಈ ಸಂದರ್ಭ ಮಾತನಾಡಿದ ಅವರು ಶಾಲಾ ಮಕ್ಕಳಿಗೆ ಪ್ರಯೋಜನವಾಗುವ ಶುದ್ಧ ನೀರನ್ನು ಒದಗಿಸುವ ಇಂಥ ಯೋಜನೆಯನ್ನು ಅನುಷ್ಠಾನಿಸುವ ಮೂಲಕ ಜೇಸಿ ಬಂಟ್ವಾಳ ಶ್ಲಾಘನಾರ್ಹ ಕೆಲಸ ಮಾಡುತ್ತಿದೆ ಎಂದರು.

ಈ ಸಂದರ್ಭ ಜೇಸಿ ವಲಯ 15ರ ಅಧ್ಯಕ್ಷ ರೋಯನ್ ಉದಯ್ ಕ್ರಾಸ್ತಾ ಶುಭ ಹಾರೈಸಿದರು. ಜೇಸಿ ಬಂಟ್ವಾಳ ಅಧ್ಯಕ್ಷ ರೋಶನ್ ರೈ, ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಹರೀಶ ಮಾಂಬಾಡಿ, ಮುಖ್ಯೋಪಾಧ್ಯಾಯಿನಿ ಕುಶಲಾ, ಜೇಸಿ ಪ್ರಾಂತ್ಯ ಉಪಾಧ್ಯಕ್ಷ ದೀಪಕ್ ಗಂಗೂಲಿ, ಕಾರ್ಯಕ್ರಮ ನಿರ್ದೇಶಕ ಮತ್ತು ವಲಯಾಧಿಕಾರಿ ಡಾ. ಬಾಲಕೃಷ್ಣ, ವಲಯಾಧಿಕಾರಿಗಳಾದ ಸಂತೋಷ್ ಜೈನ್, ರಶ್ಮಿ ಶೆಟ್ಟಿ, ರವಿರಾಜ್, ಮರಿಯಪ್ಪ, ಮಂಜುನಾಥ್, ವಲಯ ಕಾರ್ಯಕ್ರಮ ನಿರ್ದೇಶಕ ಪುರುಷೋತ್ತಮ ಶೆಟ್ಟಿ, ಜೇಸಿಐ ಬಂಟ್ವಾಳದ ನಿಕಟಪೂರ್ವ ಅಧ್ಯಕ್ಷ ಉಮೇಶ್ ಆರ್ ಮೂಲ್ಯ, ಜೇಸಿ ಬಂಟ್ವಾಳದ ಪೂರ್ವಾಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು. ಶಾಲಾ ಅಧ್ಯಾಪಕಿ ಸುಶೀಲಾ ವಂದಿಸಿದರು. ಇದೇ ವೇಳೆ ಜೇಸಿ ಬಂಟ್ವಾಳ ಘಟಕಕ್ಕೆ ಅಧಿಕೃತ ಭೇಟಿ ನೀಡಿದ ರಾಷ್ಟ್ರೀಯ ಉಪಾಧ್ಯಕ್ಷರನ್ನು ಬಿ.ಸಿ.ರೋಡಿನ ಕೈಕಂಬದಲ್ಲಿ ಘಟಕದ ಸದಸ್ಯರು ಸ್ವಾಗತಿಸಿದರು.

Edited By : PublicNext Desk
Kshetra Samachara

Kshetra Samachara

12/03/2022 07:50 am

Cinque Terre

762

Cinque Terre

0

ಸಂಬಂಧಿತ ಸುದ್ದಿ