ಬಜಪೆ: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಇವರ ಸಹಯೋಗದಲ್ಲಿ ಗ್ರಾಮ ಪಂಚಾಯತ್ ಮುಚ್ಚೂರು, ಪ್ರಗತಿ ಯುವಕ ಮಂಡಲ(ರಿ) ಮುಚ್ಚೂರು, ಶ್ರೀ ರಾಮ ಯುವಕ ಸಂಘ(ರಿ) ಮುಚ್ಚೂರು ಕಾನ,ಶಾಶ್ವತ ಯುವಕ ಸಂಘ(ರಿ)ಮುಚ್ಚೂರು ,ಜೂನಿಯರ್ ಬಾಯ್ಸ್ ನೀರುಡೆ,ಹಾಗೂ ಸಮಾಜ ಕಾರ್ಯ ವಿಭಾಗ ಆಳ್ವಾಸ್ ಮೂಡಬಿದ್ರೆ ಇವರ ಸಹಭಾಗಿತ್ವ ದಲ್ಲಿ ನೋಂದಾಯಿತ ಕಾರ್ಮಿಕ ರಿಗೆ ಆರೋಗ್ಯ ತಪಾಸಣೆ ಹಾಗೂ ತರಬೇತಿ ಕಾರ್ಯಕ್ರಮವು ಮುಚ್ಚೂರಿನ ವಿಥಿಲಾ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ದೀಪ ಬೆಳಗಿಸಿ ಉದ್ಘಾಟಿಸಿದ್ದರು. ಹಾಗೂ ಗ್ರಾ.ಪಂ ನ 25% ನಿಧಿ ಯಿಂದ ಕುಡಿಯುವ ನೀರಿನ ಸಿಂಟೆಕ್ಸ್ ವಿತರಿಸಿದರು.ಕಾರ್ಯಕ್ರಮದಲ್ಲಿ ಗ್ರಾ.ಪಂ. ಉಪಾಧ್ಯಕ್ಷ ನಾರಾಯಣ ಎ. ಯಸ್, ಕಾರ್ಮಿಕ ಇಲಾಖೆ ಅಧಿಕಾರಿ, ಜಿಲ್ಲಾ ಪಂಚಾಯತ್ ಸದಸ್ಯ ಜನಾರ್ದನ ಗೌಡ, ಗ್ರಾ.ಪಂ ಸದಸ್ಯ ವೀರಪ್ಪ ಗೌಡ, ಉದಯ್ ನಾಯ್ಕ್ ,ಶ್ರೀಮತಿ ರೇಖಾ , ಎಡಪದವು ಗ್ರಾ.ಪಂ ಅಧ್ಯಕ್ಷ ಸುಕುಮಾರ್, ಮಾಜಿ ಗ್ರಾ.ಪಂ ಅಧ್ಯಕ್ಷ ಪ್ರಕಾಶ್ ಹೆಗ್ಡೆಉಪಸ್ಥಿತರಿದ್ದರು. ಪಿಡಿಒ ಕು.ಜಲಜ ಟಿ ಸ್ವಾಗತಿಸಿದರು ಹಾಗೂ ಕಾರ್ಯದರ್ಶಿ ಸತೀಶ್ ಕುಮಾರ್ ಪಿ ವಿ ಕಾರ್ಯಕ್ರಮ ನಿರೂಪಿಸಿದರು.
Kshetra Samachara
08/03/2022 07:59 am