ಮುಲ್ಕಿ: ಮುಲ್ಕಿ ಸಮೀಪದ ಕೊಲಕಾಡಿ ಕುಂಜಾರಗಿರಿ ಶ್ರೀ ಮಹಾಲಿಂಗೇಶ್ವರ ಶಾಸ್ತಾವು ಸೇವಾ ಯುವಕ ಸಂಘದ ವಾರ್ಷಿಕೋತ್ಸವ ಹಾಗೂ ಹಾಗೂ ಸಾಧಕರಿಗೆ ಗೌರವ ಕಾರ್ಯಕ್ರಮ ಕಿಲ್ಪಾಡಿ ದಿ.ಕಲ್ಯಾಣಿ ಮೋನಪ್ಪ ಡಿ.ಮುಲ್ಕಿ ವೇದಿಕೆಯಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಪಂಜಿನಡ್ಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಅಚ್ಯುತ ಜಿ ಆಚಾರ್ ವಹಿಸಿದ್ದರು.
ಶ್ರೀಕ್ಷೇತ್ರ ಕುಂಜಾರಗಿರಿಯ ಪ್ರಧಾನ ಅರ್ಚಕ ಶ್ರೀಕಾಂತ್ ಭಟ್, ಆಶೀರ್ವಚನ ನೀಡಿ ಭಗವಂತನನ್ನು ಭಕ್ತಿಯಿಂದ ಹಾಗೂ ಕಲೆಯಿಂದ ಎಲ್ಲರೂ ಐಕ್ಯಮತ್ಯದಿಂದ ಆರಾಧಿಸುವ ಮೂಲಕ ಅನುಗ್ರಹ ಸಾಧ್ಯ ಎಂದರು
ಮುಖ್ಯ ಅತಿಥಿಗಳಾಗಿ ವೇದಮೂರ್ತಿ ವಾದಿರಾಜ ಉಪಾಧ್ಯಾಯ, ಉದ್ಯಮಿ ಕಿಲ್ಪಾಡಿ ಭಂಡಸಾಲೆ ರಂಜನ್ ಬಿ ಶೆಟ್ಟಿ, ಲಕ್ಷ್ಮಿ ಏನ್ ಕೋಟ್ಯಾನ್ ಕೊಲಕಾಡಿ, ಕಿಲ್ಪಾಡಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಮಹೇಶ್ ಅಮೀನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗೋಪಿನಾಥ ಪಡಂಗ, ಗಂಗಾಧರ ಶೆಟ್ಟಿ ಬೆರ್ಕೆತೋಟ, ಮುಂಬೈ ಸಮಿತಿಯ ಶೇಖರ್ ಶೆಟ್ಟಿ ಕಿಲ್ಪಾಡಿ ಭಂಡಸಾಲೆ, ಎನ್. ಟಿ ಕೋಟ್ಯಾನ್,ಯುವಕ ಸಂಘದ ಅಧ್ಯಕ್ಷ ಅಣ್ಣು ಎಸ್. ಕೋಟ್ಯಾನ್, ಶಶಿಧರ ಶೆಟ್ಟಿ ಪಂಜಿನಡ್ಕ, ಚಂದ್ರಕಾಂತ ಶೆಟ್ಟಿ, ಶಶಿಕಲಾ ಉಪಾಧ್ಯಾಯ ಮತ್ತಿತರರು ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ ಸಾಧಕರ ನೆಲೆಯಲ್ಲಿ ಯಕ್ಷಗಾನ ಕಲಾವಿದ ವಿಜಯಕುಮಾರ್ ಶೆಟ್ಟಿ ಮೈಲೊಟ್ಟು ಹಾಗೂ ಶ್ರೀ ಕ್ಷೇತ್ರ ಕುಂಜಾರಗಿರಿಯ ಹಿರಿಯ ಭಜನಾ ಸಂಘಟಕ ಕುಟ್ಟಿ ಶೆಟ್ಟಿ ರವರನ್ನು ಸನ್ಮಾನಿಸಲಾಯಿತು ಹಾಗೂ ಎಳೆಯ ಪ್ರತಿಭೆಗಳಾದ ವರುಣ್ ಎಸ್ ಅಮೀನ್, ಸಂಕೇತ್ ಕುಮಾರ್, ವೈಭವ್ ಸಿ ಕುಂದರ್, ಭವಿಶ್ ಸಿ. ಶೆಟ್ಟಿ, ನೀಕ್ಷಾ ಆರ್ ಶೆಟ್ಟಿ ರವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿಧನರಾದ ಸುಕುಮಾರ ಶೆಟ್ಟಿ ಮೈಲೊಟ್ಟು ರವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಚಿದಾನಂದ ಕೊಲಕಾಡಿ,ಶಂಕರ್ ಪಡಂಗ ನಿರೂಪಿಸಿದರು.
ಬಳಿಕ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
Kshetra Samachara
04/03/2022 09:26 am