ಬಜಪೆ : ಗುರುಪುರ ಪಂಚಾಯತ್ ವ್ಯಾಪ್ತಿಯ ಮೂಳೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 169ರ ಕುಕ್ಕುದಕಟ್ಟೆದಲ್ಲಿ ಪಂಚಾಯತ್ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಬಸ್ ತಂಗುದಾಣಕ್ಕೆ ಪಂಚಾಯತ್ ಅಧ್ಯಕ್ಷ ಯಶವಂತ್ ಕುಮಾರ್ ಶೆಟ್ಟಿ ಅವರು ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭ ಪಂಚಾಯತ್ ಉಪಾಧ್ಯಕ್ಷೆ ದಿಲ್ಶಾದ್ ಎ, ಸದಸ್ಯರಾದ ಸದಾಶಿವ ಶೆಟ್ಟಿ ಕೆ, ಶೋಭಾ ಎ, ಸಂಪಾ, ಬಬಿತಾ, ಬಾಲಕೃಷ್ಣ ಕೋಟ್ಯಾನ್, ಎಡ್ಲಿನ್ ಕ್ಲೀಟಾ ಡಿ'ಸೋಜ, ಮರಿಯಮ್ಮ, ಅಝ್ಮೀನಾ ಹಾಗೂ ಪಿಡಿಒ ಅಬೂಬಕ್ಕರ್, ಕಾರ್ಯದರ್ಶಿ ಅಶೋಕ್, ತಾಪಂ ಮಾಜಿ ಸದಸ್ಯ ಯಶವಂತ ಆಳ್ವ, ಜಗದೀಶ ಪೂಜಾರಿ ಬಡಕರೆ, ಇರ್ಶಾದ್, ಹರಿ ಮಲ್ಲಿ, ಪುರುಷೋತ್ತಮ ಮಲ್ಲಿ, ಸ್ಟೀವನ್, ಗೋಪಾಲ, ಮೆಲ್ವಿನ್ ಸಲ್ಡಾನ, ಚಂದ್ರಹಾಸ ಕಾವ, ಶೀನ, ರುಕ್ಕಯ್ಯ, ಶೇಖರ ಕಾಮ, ಭಾಸ್ಕರ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು
Kshetra Samachara
17/02/2022 05:56 pm