ಬಜಪೆ : ಗುರುಪುರ ಬಿಲ್ಲವ ಸೇವಾ ಸಂಘ(ರಿ) ಇದರ ವಾರ್ಷಿಕ ಮಹಾಸಭೆ ಜ. ೧೬ರಂದು ಸಂಘದ ಗುರು ಮಂದಿರದಲ್ಲಿ ನಡೆಯಿತು. ಈ ಸಂದರ್ಭ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಮಹಾಬಲ ಅಮೀನ್ ಎರಡನೇ ಬಾರಿಗೆ ಅಧ್ಯಕ್ಷರಾಗಿ ಮಹಾಬಲ ಅಮೀನ್ ಸರ್ವಾನುಮತದಿಂದ ಆಯ್ಕೆಯಾದರು.
ರಾಜೇಶ್ ಸುವರ್ಣ ಬೆಳ್ಳಿಬೆಟ್ಟು(ಉಪಾಧ್ಯಕ್ಷ), ಯೋಗೀಶ್ ಎನ್ ಪೂಜಾರಿ ಬಡಕರೆ ಗುರುಪುರ(ಕಾರ್ಯದರ್ಶಿ), ಸುನಿಲ್ ಕುಮಾರ್ ಜಲ್ಲಿಗುಡ್ಡೆ ಗುರುಪುರ(ಜೊತೆ ಕಾರ್ಯದರ್ಶಿ), ಶೀನ ಕೋಟ್ಯಾನ್ ಬೆಳ್ಳಿಬೆಟ್ಟು ಗುರುಪುರ(ಕೋಶಾಧಿಕಾರಿ), ಸುರೇಶ್ ಅಮೀನ್(ಸಂಘಟನಾ ಕಾರ್ಯದರ್ಶಿ) ಹಾಗೂ ಹಿರಿಯ ಸಲಹೆಗಾರರಾಗಿ ಬಳ್ಳಿ ಚಂದ್ರಶೇಖರ, ದೇವದಾಸ ಅಂಚನ್, ಭೋಜ ಸುವರ್ಣ ಪೊನ್ನೆಲ ಆಯ್ಕೆಯಾದರು.
Kshetra Samachara
17/01/2022 05:05 pm