ಬಜಪೆ: ಕುಪ್ಪೆಪದವು ಸಮೀಪದ ಕಿಲೆಂಜಾರು ಗ್ರಾಮದ ಬಾರ್ದಿಲ ದೇವರಗುಡ್ಡೆ ಸಾಂಬಾ ಸದಾಶಿವ ದೇವಸ್ಥಾನದಲ್ಲಿ ನಾಗದೇವರ ಪುನಃ ಪ್ರತಿಷ್ಠೆ ಹಾಗೂ ರಕ್ತೇಶ್ವರಿ ದೈವದ ಪುನಃ ಪ್ರತಿಷ್ಠೆ, ಬ್ರಹ್ಮ ಕಲಶಾಭಿಷೇಕ ಮತ್ತು ಆಶ್ಲೇಷ ಬಲಿ ಸೇವೆಗಳು 18 ರ ಶನಿವಾರದಿಂದ ಮೊದಲ್ಗೊಂಡು 19 ರ ಆದಿತ್ಯವಾರದವರೆಗೆ ನಡೆಯಲಿವೆ.
ಕ್ಷೇತ್ರದ ತಂತ್ರಿಗಳಾದ ಬ್ರಹ್ಮ ಶ್ರೀ ದೇರೆಬೈಲು ಶಿವಪ್ರಸಾದ್ ತಂತ್ರಿಗಳ ನೇತೃತ್ವದಲ್ಲಿ ಶನಿವಾರ ಸಾಯಂಕಾಲ ತೋರಣ ಮುಹೂರ್ತ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜೆ, ವಾಸ್ತು ಬಲಿ ಮತ್ತು ನಾಗದೇವರು ಮತ್ತು ರಕ್ತೇಶ್ವರಿ ದೈವದ ಬಿಂಬಧಿವಾಸ ನಡೆಯಲಿದೆ.
19 ರ ಮಂಗಳವಾರ ಬೆಳಿಗ್ಗೆ 8 ರಿಂದ ಪ್ರತಿಷ್ಟಾ ಹೋಮ, ಪ್ರಧಾನ ಹೋಮ, ನಾಗದೇವರಿಗೆ 25 ಕಲಶ ಪ್ರತಿಷ್ಠೆ, ರಕ್ತೇಶ್ವರಿ ದೈವಕ್ಕೆ ನವಕಲಶ ಪ್ರತಿಷ್ಠೆ, ಪೂರ್ವಾಹ್ನ 10.55 ರ ಕುಂಭ ಲಗ್ನದಲ್ಲಿ ನಾಗಶಿಲೆ ಸಹಿತ ನಾಗದೇವರ ಪುನಃ ಪ್ರತಿಷ್ಠೆ ಹಾಗೂ ರಕ್ತೇಶ್ವರಿ ದೈವದ ಪುನಃ ಪ್ರತಿಷ್ಟಾ ಕಲಶಾಭಿಷೇಕ, ಬ್ರಹ್ಮ ಕಲಶಾಭಿಷೇಕ ನಡೆಯಲಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.
Kshetra Samachara
17/12/2021 10:53 pm