ಬಜಪೆ :ನಮ್ಮ ರಕ್ಷಣೆಯ ಹೊಣೆಯನ್ನು ಸಂಪೂರ್ಣವಾಗಿ ಸರಕಾರದ ಮೇಲೆ ಹಾಕಬಾರದು. ನಾವು ಕೂಡ ನಮ್ಮ ರಕ್ಷಣೆಯ ಬಗ್ಗ್ಗೆ ಜಾಗ್ರತೆ ವಹಿಸಬೇಕು. ಮುಖ್ಯವಾಗಿ ಮಹಿಳೆಯರು ಜಾಗ್ರತರಾಗಿರಬೇಕು. ಕಾನೂನುಗಳ ಬಗ್ಗೆ ಗ್ರಾಮೀಣ ಮಹಿಳೆಯರಲ್ಲಿ ಅರಿವು ಮೂಡಿಸುವ ಕೆಲಸವನ್ನು ಅಂಗನವಾಡಿ ಕಾರ್ಯಕರ್ತೆಯರು ಮಾಡಬೇಕು ಎಂದು ಮಂಗಳೂರು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ನ್ಯಾ. ಪೃಥ್ವೀರಾಜ್ ವರ್ಣೆಕರ್ ಸಲಹೆ ನೀಡಿದರು.ಅವರು
ದ. ಕ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ , ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ ಹಾಗೂ ಗುರುಪುರ ಗ್ರಾಮ ಪಂಚಾಯತ್ ಗಳು ಜಂಟಿಯಾಗಿ ಪಂಚಾಯತ್ ನ ಸಭಾಭವನದಲ್ಲಿ ಆಯೋಜಿಸಿದ್ದ ಪೌಷ್ಠಿಕ ಆಹಾರ ದಿನಾಚರಣೆ ಮತ್ತು ಪೋಷಣ್ ಮಾಸಾಚರಣೆ, ಮಾತೃ ವಂದನಾ ಸಪ್ತಾಹ ಹಾಗೂ ಕಾನೂನು ಅರಿವು ಕಾರ್ಯಕ್ರಮದಲ್ಲಿ ಹೇಳಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಗುರುಪುರ ಗ್ರಾ.ಪಂ ನ ಪಂಚಾಯತ್ ಅಧ್ಯಕ್ಷ ಯಶವಂತ ಶೆಟ್ಟಿ ವಹಿಸಿದ್ದರು.ಈ ಸಂದರ್ಭ ಉಪಾಧ್ಯಕ್ಷೆ ದಿಲ್‍ಶಾದ್ ಎ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ ವಲಯ ಮೇಲ್ವೀಚಾರಕಿ ಶೈಲಾ ಕೆ ಕಾರಗಿ, ನಾಗೇಶ್, ಪಂಚಾಯತ್ ಸದಸ್ಯರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಮಹಿಳೆಯರು ಮತ್ತು ಮಕ್ಕಳು ಉಪಸ್ಥಿತರಿದ್ದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಮಾಲಿನಿ ಕಾರ್ಯಕ್ರಮ ನಿರೂಪಿಸಿ, ಅಂಗನವಾಡಿ ಮೇಲ್ವಿಚಾರಕಿ ಚಂಚಲಾಕ್ಷಿ ವಂದಿಸಿದರು. ಸ್ಥಳೀಯ ಅಂಗನವಾಡಿ ವತಿಯಿಂದ ನ್ಯಾ ವರ್ಣೆಕರ್, ಕಾರಗಿ ಹಾಗೂ ಯಶವಂತ ಶೆಟ್ಟಿ ಅವರಿಗೆ ಪುಸ್ತಕ ನೀಡಿ ಗೌರವಿಸಲಾಯಿತು.
Kshetra Samachara
07/09/2021 08:41 pm