ಸುಬ್ರಹ್ಮಣ್ಯ: ಪ್ರಸಿದ್ಧ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಇಂದಿನಿಂದ (ಸೆ.24)ರಿಂದ ಆಶ್ಲೇಷ ಸೇವೆಗಳನ್ನು ಹೆಚ್ಚಳಗೊಳಿಸಲಾಗುತ್ತಿದೆ.
ಸಂಜೆಯೂ ಆಶ್ಲೇಷ ಸೇವೆ ಆರಂಭಿಸಲಾಗುವುದು ಎಂದು ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಆಡಳಿತಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ರೂಪಾ ಎಂ.ಜೆ. ತಿಳಿಸಿದ್ದಾರೆ.
ಇಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.24 ರಿಂದ ಬೆಳಗ್ಗೆ ಎರಡು ಹಂತದಲ್ಲಿ ತಲಾ 75 ರಂತೆ 150 ಹಾಗೂ ಸಂಜೆ 75 ರಂತೆ ದಿನವೊಂದಕ್ಕೆ 225 ಸೇವೆ ನಡೆಸಲು ಅನುಕೂಲ ಮಾಡಿಕೊಡಲಾಗುತ್ತಿದೆ.
ಭಾನುವಾರ ಮತ್ತು ಆಶ್ಲೇಷ ನಕ್ಷತ್ರದಂತಹ ವಿಶೇಷ ದಿನಗಳಲ್ಲಿ 75ರ ಬದಲು ತಲಾ 100 ಪೂಜೆಗಳನ್ನು ನೆರವೇರಿಸಲಾಗುತ್ತದೆ ಎಂದರು.
ಮುಂದಿನ ದಿನಗಳಲ್ಲಿ ಭಕ್ತರಿಗೆ ಅನುಕೂಲವಾಗುವಂತೆ ಸೇವೆ ನಡೆಸುವಂತೆ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು ಮತ್ತು ಸದ್ಯ, ಸಣ್ಣ ಮಕ್ಕಳಿಗೆ ಅನ್ನ ಪ್ರಸಾದ ವಿತರಣೆ ಮಾಡಲಾಗುತ್ತಿಲ್ಲ ಎಂದು ಹೇಳಿದರು.
ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ರವೀಂದ್ರ ಎಂ.ಎಚ್. ಉಪಸ್ಥಿತರಿದ್ದರು.
ನಂತರ ಆಡಳಿತಾಧಿಕಾರಿಯವರು ದೇಗುಲದ ವತಿಯಿಂದ ನಡೆಯುತ್ತಿರುವ ಅಭಿವೃದ್ದಿ ಕಾಮಗಾರಿಗಳ ಪರಿಶೀಲನೆ ನಡೆಸಿದರು.
Kshetra Samachara
24/09/2020 10:30 am