ಮುಲ್ಕಿ: ಬಿರುವೆರ್ ಕುಡ್ಲ ವತಿಯಿಂದ ಮುಲ್ಕಿ ಬಸ್ ನಿಲ್ದಾಣದ ಪರಿಸರದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರು ವೃತ್ತ ಬೆಂಬಲಿಸಿ ಬಿರುವೆರ್ ಕುಡ್ಲ ಮುಲ್ಕಿ ಘಟಕದ ನೇತೃತ್ವದಲ್ಲಿ ಸ್ಟಿಕರ್ ಅಭಿಯಾನ ಜರಗಿತು.
ಮುಲ್ಕಿ ಘಟಕದ ಅಧ್ಯಕ್ಷ ಕಿಶೋರ್ ಸಾಲ್ಯಾನ್ ಮಾತನಾಡಿ, ಮಂಗಳೂರಿನ ಲೇಡಿಹಿಲ್ ವೃತ್ತಕ್ಕೆ ಜಗದ್ಗುರು ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರು ಸೂಕ್ತ. ಸರಕಾರ ಆದಷ್ಟು ಬೇಗನೆ ಅನುಮತಿ ನೀಡಲಿ ಎಂದು ಅಭಿಯಾನಕ್ಕೆ ಚಾಲನೆ ನೀಡಿ, ಮಾತನಾಡಿದರು.
ಮುಲ್ಕಿ ರಿಕ್ಷಾ ಚಾಲಕ, ಮಾಲಕರ ಸಂಘದ ಕೋಶಾಧಿಕಾರಿ ಕೃಷ್ಣಪ್ಪ ಸನಿಲ್ ಮಾತನಾಡಿ, ಜಾತಿ ಮತ ಬೇಧ ವಿಲ್ಲದ ಈ ಸತ್ಕಾರ್ಯಕ್ಕೆ ಸಂಪೂರ್ಣ ಬೆಂಬಲವಿದೆ ಹಾಗೂ ಯಾವುದೇ ಸಂದರ್ಭ ದಲ್ಲೂ ಬಿರುವೆರ್ ಕುಡ್ಲ ದೊಂದಿಗೆ ನಾವಿದ್ದೇವೆ ಎಂದರು.
ಮುಲ್ಕಿ ಆಟೋ ಯೂನಿಯನ್ ಅಧ್ಯಕ್ಷ ನಾಗರಾಜ್ , ಇತರ ಪದಾಧಿಕಾರಿಗಳು ಹಾಗೂ ರಿಕ್ಷಾ ಚಾಲಕರು ತಮ್ಮ ಆಟೋರಿಕ್ಷಾ ಕ್ಕೆ ಸ್ಟಿಕರ್ ಅಂಟಿಸುವ ಮೂಲಕ ಬೆಂಬಲ ನೀಡಿದರು.
ಮುಲ್ಕಿ ಯ ಬಸ್ಸು, ಕಾರು, ರಿಕ್ಷಾ, ಬೈಕ್ ಇತ್ಯಾದಿ ವಾಹನಗಳಿಗೆ ಬೆಂಬಲ ಸ್ಟಿಕ್ಕರ್ ಹಚ್ಚಲಾಯಿತು.
ಈ ಅಭಿಯಾನದಲ್ಲಿ ಬಿರುವೆರ್ ಕುಡ್ಲ ಮುಲ್ಕಿ ಘಟಕ ಕಾರ್ಯದರ್ಶಿ ಸತೀಶ್ ಕಿಲ್ಪಾಡಿ, ಸಲಹೆಗಾರ ಉಮೇಶ್ ಮಾನಂಪಾಡಿ, ಜೊತೆ ಕಾರ್ಯದರ್ಶಿ ರಕ್ಷಿತ್ ಕೊಳಚಿಕಂಬಳ, ಸಂಘಟನೆ ಕಾರ್ಯದರ್ಶಿ ರಮಾನಾಥ್ ಸುವರ್ಣ, ಗ್ರಾಮ ಸಂಚಾಲಕರಾದ ಜಗದೀಶ್ ಕಕ್ವಾ, ಸತೀಶ್ ಕೋಟ್ಯಾನ್ ಮಾನಂಪಾಡಿ, ರಾಮಚಂದ್ರ ಬಡಗಹಿತ್ಲು ಮತ್ತು ಸದಸ್ಯರು ಉಪಸ್ಥಿತರಿದ್ದರು.
Kshetra Samachara
01/10/2020 08:31 am