ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕಾಪಿಕಾಡ್ ಸರಕಾರಿ ಶಾಲೆಯಲ್ಲಿ ಪ್ರಧಾನಿ ಜನ್ಮ ದಿನಾಚರಣೆ ಪ್ರಯುಕ್ತ ಸೇವಾ ಸಪ್ತಾಹ

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನಾಚರಣೆ ಪ್ರಯುಕ್ತ ಸೇವಾ ಸಪ್ತಾಹದ ಅಂಗವಾಗಿ ನಗರ ದಕ್ಷಿಣ ಮಂಡಲ ಮಹಿಳಾ ಮೋರ್ಚಾ ವತಿಯಿಂದ ಬಿಜೈ ಕಾಪಿಕಾಡ್ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ಇಂದು ಗಿಡ ನೆಡುವ ಕಾರ್ಯಕ್ರಮ ನಡೆಯಿತು.

ಮೇಯರ್ ದಿವಾಕರ್, ಶಾಸಕ ವೇದವ್ಯಾಸ್ ಕಾಮತ್, ಮಂಡಲ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ, ಮಂಡಲ ಪ್ರಧಾನ ಕಾರ್ಯದರ್ಶಿ ರೂಪಾ ಡಿ. ಬಂಗೇರ ಹಾಗೂ ಸುರೇಂದ್ರ ಜೆ., ಮಂಡಲ ಕಾರ್ಯದರ್ಶಿ ಸುರೇಖಾ ಹೆಗ್ಡೆ, ಮಂಗಳೂರು ನಗರ ದಕ್ಷಿಣ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಪೂರ್ಣಿಮಾ ರಾವ್, ಪ್ರಧಾನ ಕಾರ್ಯದರ್ಶಿ ನರ್ಮದಾ ರೈ ಮನಪಾ ಸದಸ್ಯೆ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷೆ ಪೂರ್ಣಿಮಾ, ಮನಪಾ ಸದಸ್ಯೆ ಚಂದ್ರಾವತಿ, ವಾರ್ಡಿನ ಹಿರಿಯ ಕಾರ್ಯಕರ್ತೆ ಕಾತ್ಯಾಯನಿ ರಾವ್, ಪೂರ್ವ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಅಜಯ್, ಪ್ರಮುಖರಾದ ಪ್ರಶಾಂತ್ ಆಳ್ವ ,ಚರಿತ್ ಪೂಜಾರಿ ,ದಯಾನಂದ್, ಸಂತೋಷ್ ಹಾಗೂ ವಾರ್ಡ್ ಕಾರ್ಯಕರ್ತರು, ಶಾಲಾ ಮುಖ್ಯಶಿಕ್ಷಕಿ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

23/09/2020 02:25 pm

Cinque Terre

11.33 K

Cinque Terre

2

ಸಂಬಂಧಿತ ಸುದ್ದಿ