ಮಂಗಳೂರು: ಇಲ್ಲಿನ ಪೆರ್ಮನ್ನೂರಿನ ಸೈಂಟ್ ಸೆಬಾಸ್ಟಿಯನ್ ಪದವಿ ಪೂರ್ವ ಮತ್ತು ಪದವಿ ಕಾಲೇಜಿನ ಪ್ರಾಂಶುಪಾಲರಾದ ವಂ.ಫಾ. ಎಡ್ವಿನ್ ಮಸ್ಕರೇನಸ್ (57) ಅಲ್ಪಾವಧಿಯ ಅನಾರೋಗ್ಯದಿಂದ ಇಂದು ನಿಧನರಾದರು.
ಮೇ 7, 1991 ರಂದು ಧರ್ಮಗುರುವಾಗಿ ನೇಮಕಗೊಂಡ ಅವರು ಶಿರ್ವ, ವಾಮಂಜೂರು, ಬೆಂದೋರ್ ಪ್ಯಾರಿಷ್‌ಗಳಲ್ಲಿ ಪ್ಯಾರಿಷ್ ಧರ್ಮಗುರುವಾಗಿ ಸೇವೆ ಸಲ್ಲಿಸಿದ್ದರು.
1999 ರಲ್ಲಿ ಬೀದರ್‌ನ ಸೈಂಟ್ ಜೋಸೆಫ್ ಸಂಸ್ಥೆಯ ಮುಖ್ಯ ಶಿಕ್ಷಕರಾಗಿ, ಬಳಿಕ ನಾರಾವಿಯ ಸೈಂಟ್ ಆ್ಯಂಟನಿ ಪಿಯು ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಹಿತ ಹಲವು ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.
Kshetra Samachara
20/09/2020 01:28 pm