ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗೆಳೆಯನ ಜೊತೆಗೆ ನಾಪತ್ತೆಯಾಗಿದ್ದ ಮಹಿಳೆ ಪತ್ತೆ

ಬಂಟ್ವಾಳ: ನಾಪತ್ತೆಯಾಗಿದ್ದ ವಿಧವೆಯೊಬ್ಬಳು ಪ್ರಿಯಕರನ ಜತೆಗೆ ಉಳ್ಳಾಲದಲ್ಲಿ ಪತ್ತೆಯಾಗಿದ್ದಾಳೆ. ಈ ಮಹಿಳೆಯನ್ನು ಒಂದೂವರೆ ವರ್ಷದ ಹಿಂದೆ ಹಿಂದೂ ಸಂಘಟನೆಗಳು ಫಜೀರು ಗೋ ವನಿತಾ ಆಶ್ರಮಕ್ಕೆ ಸೇರಿಸಿದ್ದವು.

ಅಡ್ಯಾರು ಪದವಿನ್ಲಿದ್ದ ವಿಧವೆಯು ವಾಮಂಜೂರಿನಲ್ಲಿದ್ದ ಪುರಷನನ್ನು ಪ್ರೀತಿಸುತ್ತಿದ್ದಳು. ಹೀಗಾಗಿ ಹಿಂದೂ ಸಂಘಟಕರು ಇಬ್ಬರನ್ನೂ ಬೇರೆ ಮಾಡಿಸಿದ್ದರು. ಬಳಿಕ ಮಹಿಳೆಯನ್ನು ಆಶ್ರಮಕ್ಕೆ ಸೇರಿಸಿದ್ದರು. ಇಷ್ಟಾದರೂ ಆಕೆಯು ಗೆಳೆಯನ ಸಂಪರ್ಕದಲ್ಲಿದ್ದಳು. ನವೆಂಬರ್‌ 2ರಂದು ಮಹಿಳೆ ಆಶ್ರಮದಿಂದ ನಾಪತ್ತೆಯಾಗಿದ್ದಳು.

ಈ ಸಂಬಂಧ ಆಶ್ರಮ ಸಮಿತಿಯು ಕೊಣಾಜೆ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಶೋಧ ಕಾರ್ಯ ನಡೆಸಿದ ಪೊಲೀಸರು ಮಹಿಳೆಯನ್ನು ಮತ್ತೆ ಪುರುಷನೊಂದಿಗೆ ಪತ್ತೆ ಹಚ್ಚಿದ್ದಾರೆ. ಇಬ್ಬರು ವಯಸ್ಕರಾಗಿರುವ ಹಿನ್ನೆಲೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.

Edited By : Vijay Kumar
Kshetra Samachara

Kshetra Samachara

15/11/2020 05:32 pm

Cinque Terre

4.07 K

Cinque Terre

0

ಸಂಬಂಧಿತ ಸುದ್ದಿ