ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ಮೊಗ್ರ ಸೇತುವೆ - ಕಮಿಲ ರಸ್ತೆ ದುರವಸ್ಥೆ; ಸ್ಥಳೀಯರಿಂದ ಪ್ರಧಾನಿಗೆ ವೀಡಿಯೊ ಸಿ.ಡಿ. ರವಾನೆ

ಸುಳ್ಯ: ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಪ್ರದೇಶದಲ್ಲಿ ಸೇತುವೆ ನಿರ್ಮಾಣ ಹಾಗೂ ಗುತ್ತಿಗಾರು-ಕಮಿಲ-ಬಳ್ಪ ರಸ್ತೆ ಸಮಸ್ಯೆಯ ವೀಡಿಯೊ ಸಹಿತ ವಿವರಣೆಯ ಸಿ.ಡಿ.ಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಕಮಿಲ ಮೊಗ್ರ ಬಳ್ಳಕ್ಕದ ನಾಗರಿಕ ಹೋರಾಟ ಕ್ರಿಯಾ ಸಮಿತಿ ಸದಸ್ಯರು ಕಮಿಲ ಅಂಚೆ ಕಚೇರಿ ಮೂಲಕ ಮಂಗಳವಾರ ಕಳುಹಿಸಿದ್ದಾರೆ.

ಇಂದು ಅತ್ಯಾಧುನಿಕ ತಂತ್ರಜ್ಞಾನದ ಮಾಧ್ಯಮಗಳಿದ್ದರೂ ಅಂಚೆ ಕಚೇರಿ ಮೂಲಕವೇ ಸಮಸ್ಯೆ ಹೊತ್ತ ವೀಡಿಯೊ ಸಿ.ಡಿ.ಯನ್ನು ಗ್ರಾಮೀಣ ಭಾಗದ ಅಂಚೆ ಕಚೇರಿ ಮೂಲಕವೇ ರವಾನೆಯ ಉದ್ದೇಶದ ಹಿಂದೆ ಗ್ರಾಮೀಣ ಭಾಗದ ಅಂಚೆ ಕಚೇರಿಯನ್ನು ಸರ್ಕಾರಗಳು ಬಲವರ್ಧನೆ ಮಾಡಬೇಕು ಎಂಬ ಕಾಳಜಿಯೂ ಇದೆ.

ಗ್ರಾಮೀಣ ಭಾಗದ ಬಹುಪಾಲು ಮಂದಿ ಅಂಚೆ ಕಚೇರಿ ಬಳಸುತ್ತಿದ್ದಾರೆ. ಗ್ರಾಮಾಂತರದ ಬ್ಯಾಂಕಿಂಗ್‌ ವ್ಯವಸ್ಥೆ ಕೂಡ ಅಂಚೆ ಕಚೇರಿಯೇ ಆಗಿದೆ.

ಹೀಗಾಗಿ ಆಧುನಿಕ ವ್ಯವಸ್ಥೆ ಇದ್ದರೂ ಗ್ರಾಮೀಣ ಭಾಗದ ಅಂಚೆ ಕಚೇರಿ ಬಳಕೆಯಾಗುವಂತೆ ಮಾಡಲು ಸಾಮೂಹಿಕ ಸಿ.ಡಿ. ರವಾನೆಯ ಉದ್ದೇಶವನ್ನು ನಾಗರಿಕ ಹೋರಾಟ ಕ್ರಿಯಾ ಸಮಿತಿ ಹೊಂದಿದೆ.

ಗ್ರಾಮಾಂತರದ ಅಂಚೆ ಕಚೇರಿಗಳು ಇಂದಿಗೂ ನೆಟ್ವರ್ಕ್‌ ಸಮಸ್ಯೆ ಹೊಂದಿವೆ. ಇಂಟರ್ನೆಟ್‌ ಕೈಕೊಟ್ಟರೆ ಕೆಲಸ ಮಾಡಲಾಗದ ಸ್ಥಿತಿ ಇದೆ.

ವೀಡಿಯೊ ಸಿ.ಡಿ. ರವಾನೆ ಸಂದರ್ಭ ನಾಗರಿಕ ಹೋರಾಟ ಕ್ರಿಯಾ ಸಮಿತಿ ಪದಾಧಿಕಾರಿಗಳಾದ ಪಿ.ಎಸ್‌. ಗಂಗಾಧರ ಭಟ್ ಪುಚ್ಚಪ್ಪಾಡಿ, ಬಿಟ್ಟಿ ಬಿ ನೆಡುನೀಲಂ, ಜೀವನ್‌ ಮಲ್ಕಜೆ, ಲಕ್ಷ್ಮೀಶ ಗಬ್ಲಡ್ಕ, ಮಹೇಶ್‌ ಪುಚ್ಚಪ್ಪಾಡಿ, ಹರ್ಷಿತ್‌ ಕಾಂತಿಲ, ಬಾಬು ಕಮಿಲ, ಸುರೇಶ್‌ ಮೊಗ್ರ , ವಿಶ್ವನಾಥ ಕೇಂಬ್ರೋಳಿ ಮತ್ತಿತರರು ಇದ್ದರು.

Edited By : Nirmala Aralikatti
Kshetra Samachara

Kshetra Samachara

11/11/2020 02:45 pm

Cinque Terre

12.14 K

Cinque Terre

1

ಸಂಬಂಧಿತ ಸುದ್ದಿ