ಮಂಗಳೂರು: ವಾಯುಭಾರ ಕುಸಿತದಿಂದಾಗಿ ಉಂಟಾದ ಜೋರು ಗಾಳಿ, ಮಳೆಗೆ ಸಮುದ್ರದಲ್ಲಿ ತೂಫಾನ್ ಎದ್ದಿರುವ ಹಿನ್ನೆಲೆಯಲ್ಲಿ ಹಲವು ಆಳಕಡಲ ಬೋಟ್‌ಗಳು ಮೀನುಗಾರಿಕೆ ಸ್ಥಗಿತಗೊಳಿಸಿ ಹಳೆ ಬಂದರ್ ದಕ್ಕೆಯಲ್ಲಿಯೇ ಲಂಗರು ಹಾಕಿವೆ.
ಇದೀಗ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮೀನುಗಾರಿಕೆಗೆ ತೆರಳಿದ್ದ ನೂರಕ್ಕೂ ಅಧಿಕ ಬೋಟುಗಳು ಅರ್ಧದಿಂದಲೇ ಹಿಂತಿರುಗಿ ದಡ ಸೇರಿವೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆಯೂ ಎಚ್ಚರಿಕೆ ನೀಡಿತ್ತು.
Kshetra Samachara
15/10/2020 11:24 pm