ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಡಬ: ಇಚಿಲಂಪಾಡಿ ಸೇತುವೆ ಬಳಿ ಮರಳು ಸೂರೆ; ಪೊಲೀಸರಿಂದ ರಸ್ತೆ ಮುಚ್ಚಿ ತಡೆ

ಕಡಬ: ಕಡಬ ತಾಲೂಕಿನ ಸುಬ್ರಹ್ಮಣ್ಯ - ಧರ್ಮಸ್ಥಳ ರಾಜ್ಯ ಹೆದ್ದಾರಿಯ ಇಚಿಲಂಪಾಡಿ ಸೇತುವೆ ಸಮೀಪದಿಂದ ಹಗಲು- ರಾತ್ರಿ ಎನ್ನದೆ ನಿರಂತರವಾಗಿ ನಡೆಯುತ್ತಿದ್ದ ಅಕ್ರಮ ಮರಳು ಸಾಗಾಟಕ್ಕೆ ಕಡಬ ಠಾಣೆ ಎಸ್ಐ ನೇತೃತ್ವದ ಪೊಲೀಸರ ತಂಡ ಕಡಿವಾಣ ಹಾಕಿದ್ದಾರೆ.

ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಯಾರ ಭಯವೂ ಇಲ್ಲದೇ ರಾಜಾರೋಷವಾಗಿ ಮರಳು ದಂಧೆಕೋರರು ಅನುಮತಿ ರಹಿತವಾಗಿ ಮರಳು ಸಾಗಾಟ ಮಾಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಆದರೆ, ಸ್ಥಳೀಯ ಗ್ರಾಪಂ ಅಧಿಕಾರಿಗಳಾಗಲಿ, ಕಂದಾಯ ಇಲಾಖೆಯಾಗಲೀ ಇದನ್ನು ತಡೆಯುವ ಗೋಜಿಗೆ ಹೋಗಲೇ ಇಲ್ಲ. ಮರಳು ಸಾಗಾಟಗಾರರು ಪೊಲೀಸರ ಹೆಸರನ್ನೇ ದುರ್ಬಳಕೆ ಮಾಡಿಕೊಂಡು ಪಿಕಪ್, ಲಾರಿಗಳಲ್ಲಿ ನಿರಂತರ ಮರಳು ಸಾಗಾಟದಲ್ಲಿ ನಿರತರಾಗಿದ್ದರು.

ಇದೀಗ ಮಿತಿಮೀರಿದ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಕಡಬ ಠಾಣೆ ಎಸ್ ಐ ರುಕ್ಮ ನಾಯ್ಕ್ ನೇತೃತ್ವದ ಪೊಲೀಸರ ತಂಡ ಖುದ್ದು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ನದಿಯವರೆಗೆ ನಿರ್ಮಿಸಿದ ಅನಧಿಕೃತ ರಸ್ತೆಗಳನ್ನು ಜೆಸಿಬಿ ಮೂಲಕ ಮುಚ್ಚಿಸಿದ್ದಾರೆ.

ಠಾಣೆ ವ್ಯಾಪ್ತಿಯ ಎಲ್ಲ ಅಕ್ರಮ ಮರಳು ನಿಕ್ಷೇಪಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಅಕ್ರಮ ಮರಳುಗಾರಿಕೆ ಕಂಡು ಬಂದಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಸ್ಐ ಎಚ್ಚರಿಕೆ ನೀಡಿದ್ದಾರೆ.

Edited By : Vijay Kumar
Kshetra Samachara

Kshetra Samachara

15/01/2021 09:57 pm

Cinque Terre

3.87 K

Cinque Terre

0

ಸಂಬಂಧಿತ ಸುದ್ದಿ