ಮೂಡುಬಿದಿರೆ: ತಾಲೂಕಿನ ಪುತ್ತಿಗೆ ಗ್ರಾ.ಪಂ. ವ್ಯಾಪ್ತಿಯ ಸಂಪಿಗೆ ಎಂಬಲ್ಲಿ ಕಾರ್ಯಾಚರಿಸುತ್ತಿರುವ ಪೆಟ್ರೋಲ್ ಪಂಪ್ ನಿಂದಾಗಿ ತೈಲ ಸೋರಿಕೆಯಾಗಿ ಸುತ್ತಮುತ್ತಲಿನ ಬಾವಿಗಳ ನೀರು ಕಲುಷಿತಗೊಂಡಿದ್ದು, ಈ ಬಗ್ಗೆ ಸುಧಾಕರ ಎಂಬವರು ಕೋರ್ಟ್ ಮೆಟ್ಟಿಲೇರಿ ದಾವೆ ಹೂಡಿದ್ದು, ಕೋರ್ಟ್ ಇದೀಗ ತಡೆಯಾಜ್ಞೆ ನೀಡಿದೆ.
ಸಂಪಿಗೆಯಲ್ಲಿ ಕಳೆದ ವರ್ಷ ಆರಂಭಗೊಂಡಿರುವ ಪೆಟ್ರೋಲ್ ಪಂಪ್ ಪ್ರಾರಂಭದಲ್ಲಿ ತಾಂತ್ರಿಕ ತೊಂದರೆಯಿಂದಾಗಿ ದಾಸ್ತಾನಿನ ತೈಲ ಸೋರಿಕೆಯಾಗಿತ್ತು. ಇದರಿಂದ ಪೆಟ್ರೋಲಿಯಂನ್ನು ಒಂದು ಪಾಳುಬಾವಿ ಮೂಲಕ ಭೂಮಿಗೆ ಇಂಗಿಸಿದ್ದು, ಸ್ಥಳೀಯ ಬಾವಿಗಳಲ್ಲಿನ ನೀರು ಕಲುಷಿತಗೊಂಡಿತ್ತು. ಆ ಬಳಿಕ ಪಂಪ್ ಮಾಲೀಕರು ಸ್ಥಳೀಯರನ್ನು ಸಮಾಧಾನ ಪಡಿಸಿ ಕೊಳವೆ ಬಾವಿ ಮೂಲಕ ನೀರು ಸರಬರಾಜು ಮಾಡುತ್ತಿದ್ದರು.
ಇತ್ತೀಚೆಗೆ ನೀರು ಸರಬರಾಜನ್ನು ತಡೆ ಹಿಡಿದಿದ್ದು, ಸ್ಥಳೀಯರಿಗೆ ಶುದ್ಧನೀರಿನ ಸಮಸ್ಯೆ ಎದುರಾಗಿದೆ. ದೂರುದಾರರು ಪೊಲೀಸ್ ಠಾಣೆಗೂ ದೂರು ನೀಡಿದ್ದು ಪೊಲೀಸರು ಪೆಟ್ರೋಲ್ ಪಂಪ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
Kshetra Samachara
01/01/2021 11:02 pm