ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ರಸ್ತೆ, ಫುಟ್ ಪಾತ್ ಅತಿಕ್ರಮಿಸಿದರೆ ಹುಷಾರ್ ; ಪೊಲೀಸ್‌ ಕಮಿಷನರ್‌ ಎಚ್ಚರಿಕೆ

‌ಮಂಗಳೂರು: ನಗರ ವ್ಯಾಪ್ತಿಯ ವಾಣಿಜ್ಯ ಸಂಕೀರ್ಣಗಳ ಮುಂದೆ ಫುಟ್‌ಪಾತ್ ಹಾಗೂ ರಸ್ತೆಯನ್ನು ಅತಿಕ್ರಮಿಸಿ ಪಾರ್ಕಿಂಗ್ ಮಾಡಿರುವ ಜಾಗವನ್ನು ತೆರವುಗೊಳಿಸಲು ಸಂಬಂಧಪಟ್ಟವರಿಗೆ ನೋಟಿಸ್ ನೀಡಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ತಿಳಿಸಿದ್ದಾರೆ.

ನಗರದ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಮಾದಕ ದ್ರವ್ಯ ವಿರೋಧಿ ಸಪ್ತಾಹದ ಅಂಗವಾಗಿ ಶುಕ್ರವಾರ ನಡೆದ ‘ಫೋನ್‌ ಇನ್’ ಕಾರ್ಯಕ್ರಮ ದಲ್ಲಿ ಮಾತನಾಡಿದ‌‌ ಅವರು, ಈಗಾಗಲೇ ನಗರದ 50 ಕಡೆಗಳಲ್ಲಿ ಆಕ್ರಮಿತ ಪಾರ್ಕಿಂಗ್ ಸ್ಥಳಗಳನ್ನು ಗುರುತಿಸಲಾಗಿದೆ.

ತೆರವು ಮಾಡಿಸುವಂತೆ ಮಹಾ ನಗರ ಪಾಲಿಕೆಗೆ ಪತ್ರ ಬರೆಯಲಾಗಿದೆ. ಎರಡು ತಿಂಗಳಾದರೂ ಅವರಿಂದ ಯಾವುದೇ ಸ್ಪಂದನೆ ಸಿಗದಿರುವುದರಿಂದ ಪೊಲೀಸ್ ಇಲಾಖೆಯಿಂದ ನೋಟಿಸ್ ನೀಡಿ ತೆರವು ಮಾಡಲು ಸೂಚನೆ ನೀಡಲಾಗುವುದು‌.

ಆ ಬಳಿಕವೂ ತೆರವು ಮಾಡದಿದ್ದರೆ ಮಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದರು.

ವರ್ಷದ ಬಳಿಕ ಪೊಲೀಸ್ ಆಯುಕ್ತರು ಫೋನ್ ಇನ್ ಕಾರ್ಯಕ್ರಮವನ್ನು ಶುಕ್ರವಾರ ಆಯೋಜಿಸಿದ್ದರೂ ಹೆಚ್ಚಿನ ಸ್ಪಂದನೆ ಸಿಗಲಿಲ್ಲ. ಬೆಳಗ್ಗೆ 11ರಿಂದ 12ರ ಮಧ್ಯೆ ಕೇವಲ 5 ಕರೆಗಳು ಮಾತ್ರ ಬಂದಿದ್ದವು.

ಆ ಪೈಕಿ ಹೆಚ್ಚಿನವುಗಳು ಟ್ರಾಫಿಕ್ ಸಮಸ್ಯೆಯದ್ದಾಗಿತ್ತು.

ನಗರದ ಲಾಲ್‌ಭಾಗ್ ಸಾಯಿಬಿನ್ ಕಾಂಪ್ಲೆಕ್ಸ್ ಎದುರು ಫುಟ್‌ಪಾತ್ ಮೇಲೆಯೇ ವಾಹನ ಪಾರ್ಕಿಂಗ್ ಮಾಡುತ್ತಿದ್ದಾರೆ. ಇದರಿಂದ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರೊಬ್ಬರು ದೂರಿದರು.

ಉರ್ವ ಮಾರ್ಕೆಟ್‌ನಲ್ಲಿ ಅಡ್ಡಾದಿಡ್ಡಿಯಾಗಿ ಪಾರ್ಕಿಂಗ್ ಮಾಡುವುದರಿಂದ ವಾಹನ ದಟ್ಟಣೆ ಉಂಟಾಗುತ್ತಿದೆ. ಸಿಟಿ ಬಸ್‌ಗಳನ್ನು ಮಾರ್ಗದ ನಡುವೆಯೇ ನಿಲ್ಲಿಸಲಾಗುತ್ತಿದೆ ಎಂದು ವ್ಯಕ್ತಿಯೊಬ್ಬರು ದೂರಿದರು.

ತಕ್ಷಣ ಕಮಿಷನರ್ ಸಂಚಾರ ವಿಭಾಗದ ಎಸಿಪಿ ನಟರಾಜ್ ಅವರನ್ನು ಸ್ಥಳಕ್ಕೆ ತೆರಳಿ ಪರಿಶೀಲಿಸುವಂತೆ ಸೂಚಿಸಿದರು.

Edited By : Nirmala Aralikatti
Kshetra Samachara

Kshetra Samachara

19/12/2020 09:24 am

Cinque Terre

8.15 K

Cinque Terre

0

ಸಂಬಂಧಿತ ಸುದ್ದಿ