ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು:ಹಿಂದುಗಳ ಶೃದ್ದಾ ಕೇಂದ್ರ ಅಪವಿತ್ರ ಸಂಘಟನೆಯಿಂದ ಪ್ರತಿಭಟನೆ

ಮಂಗಳೂರು : ಮಂಗಳಾದೇವಿ ನಗರದ ಹಿಂದು ಜಾಗರಣ ವೇದಿಕೆ ಆಶ್ರಯದಲ್ಲಿ ಮಂಗಳಾದೇವಿ ನಗರ ವ್ಯಾಪ್ತೀಯ ಕಾರ್ಣಿಕದ ದೈವಸ್ಧಾನ ಮತ್ತು ಮಂಗಳಾದೇವಿ ದೇವಸ್ಧಾನದ ಕಾಣಿಕೆ ಡಬ್ಬಿ ಒಳಗೆ ಬೇಡವಾದ ವಸ್ತುಗಳನ್ನು ಹಾಕಿರುವುದು ಮಾತ್ರವಲ್ಲದೆ, ಹಿಂದುಗಳ ಶೃದ್ದಾ ಕೇಂದ್ರ ಅಪವಿತ್ರ ಗೊಳಿಸಿದ್ದು ಹಿಂದುಗಳ ಧಾರ್ಮಿಕ ಭಾವನೆಗಳಿಗೆ ದಕ್ಕೆ ಉಂಟು ಮಾಡಿದ ಘಟನೆಗಳನ್ನು ಖಂಡಿಸಿ ಮಾರ್ನಮಿಕಟ್ಟೆ ಯಲ್ಲಿ ಹಿಂದು ಜಾಗರಣ ವೇದಿಕೆ ವತಿಯಿಂದ ಪ್ರತಿಭಟನಾ ಸಭೆ ನಡೆಯಿತು.

ಪ್ರತಿಭಟನಾ ಸಭೆಯನ್ನು ಉದ್ಧೇಶಿಸಿ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ಪುಷ್ಪರಾಜ್ ಕುಳಾಯಿ ಹಿಂದುಗಳ ಧಾರ್ಮಿಕ ಕ್ಷೇತ್ರಗಳನ್ನು ಬೇಕು ಬೇಕೆಂದೇ ಅಪವಿತ್ರ ಗೊಳಿಸಿದ್ದು ಅಕ್ಷಮ್ಯ ಅಪರಾಧ ಇದನ್ನು ನೋಡಿ ಹಿಂದು ಸಮಾಜ ಕೈಕಟ್ಟಿ ಕೂತ್ತಿಲ್ಲ ಬದಲಾಗಿ ಮತಾಂಧರ ಸವಾಲನ್ನು ನೇರವಾಗಿ ಎದುರಿಸಲು ಹಿಂದು ಸಮಾಜ ಶತ ಸಿದ್ಧವಿದೆ ಎಂದು ಎಚ್ಚರಿಸಿದರು. ಈ ಸಂದರ್ಭ ನಗರ ಅಧ್ಯಕ್ಷರಾದ ಸುಧೀಂದ್ರ ಪ್ರಕಾಶ್ ದುಷ್ಕೃತ್ಯ ಎಸಗಿದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿದರು. ಹಿಂದು ಜಾಗರಣ ವೇದಿಕೆ'ಯ ಜಿಲ್ಲಾ ನಿಧಿ ಪ್ರಮುಖ್ ನವೀನ್ ಮಂಗಳಾದೇವಿ, ಕಾರ್ಯದರ್ಶಿ ಅನಿಲ್ ಕೋಡಿಕಲ್, ನಗರ ಸಂಚಾಲಕ ಪವನ್ ಬೋಳಾರ, ಮಹಿಳಾ ಪ್ರಮುಖ್ ಲೋಲಾಕ್ಷಿ ಉಪಸ್ಥಿತರಿದ್ದರು.

ಬಾಬುಗಡ್ಡೆ'ಯ ಬಬ್ಬು ಸ್ವಾಮಿ ದೈವಸ್ಧಾನದ ರಘುವೀರ್ ಮಾತನಾಡಿ ನಮಗೆ ಪೊಲೀಸ್ ಇಲಾಖೆ ಮೇಲೆ ವಿಶ್ವಾಸವಿದ್ದು ಆದರೆ ಇಲ್ಲಿಯ ತನಕ ಬಂಧನವಾಗದೆ ಇರುವುದು ದುರಂತ ಎಂದು ತಿಳಿಸಿದರು. ಎಮ್ಮೆಕೆರೆ ಕೋಡ್ದಬ್ಬು ಕ್ಷೇತ್ರದ ಸದಾಶಿವಾ, ಶ್ರೀ ಉಮಾಮಹೇಶ್ವರಿ ದೇವಸ್ಧಾನದ ದಿನೇಶ್ ಪೂಜಾರಿ, ಅಖಿಲ ಭಾರತ ಮುಂಡಾಲ ವೇದಿಕೆ ಸ್ಧಾಪಕ ಅಧ್ಯಕ್ಷರಾದ ಕಿರಣ್ ಕೋಡಿಯಾಲ್ ಬೈಲ್, ಸ್ಧಳೀಯ ಕಾರ್ಪೊರೇಟರ್ ಗಳಾದ ಶ್ರೀಮತಿ ಬಾನುಮತಿ, ರೇವತಿ ಶ್ಯಾಮ್ ಸುಂದರ್, ಶೈಲೇಶ್ ಶೆಟ್ಟಿ, ಹಿಂದು ಯುವ ಸೇನೆ'ಯ ಪ್ರಮುಖರಾದ ನಾಗರಾಜ್ ಅಚಾರ್ಯ ಸೇರಿದಂತೆ ತಾಯಂದಿರು ಮತ್ತು ಯುವಕರು ನೂರಾರೂ ಮಂದಿ ಕಾರ್ಯಕರ್ತರು ಉಪಷ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

27/01/2021 10:06 am

Cinque Terre

3.22 K

Cinque Terre

0

ಸಂಬಂಧಿತ ಸುದ್ದಿ