ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ : ಗೂಡಿನಬಳಿಯಲ್ಲಿ ಗುಡ್ಡ ಕುಸಿತ ಭೀತಿ; ತಡೆಗೋಡೆಗೆ ಡಿಮ್ಯಾಂಡ್

ಬಂಟ್ವಾಳ: ನೇತ್ರಾವತಿ ನದಿ ಸಮೀಪವೇ ಇರುವ ಬಂಟ್ವಾಳ ಪುರಸಭೆ ವ್ಯಾಪ್ತಿಯ ಬಿ.ಸಿ.ರೋಡಿನ ಗೂಡಿನಬಳಿ ಎಂಬಲ್ಲಿ ಗುಡ್ಡ ಕುಸಿತದ ಭೀತಿಯಲ್ಲಿದ್ದು, ಸ್ಥಳೀಯರಿಂದ ತಡೆಗೋಡೆಗೆ ಬೇಡಿಕೆ ವ್ಯಕ್ತವಾಗಿದೆ.

ಕುಸಿತ ಉಂಟಾದಲ್ಲಿ ಸ್ಥಳೀಯ ಮನೆಗಳಿಗೆ ಹಾನಿಯಾಗುವ ಜತೆಗೆ ರಸ್ತೆ ಸಂಪರ್ಕವೂ ಕಡಿತಗೊಳ್ಳುತ್ತದೆ. ಜತೆಗೆ ಪುರಸಭೆ ಹಲವು ವಾರ್ಡ್ ಗಳ ನೂರಾರು ಮನೆಗಳಿಗೆ ನೀರಿನ ಸಂಪರ್ಕವೂ ಕಡಿತಗೊಳ್ಳುತ್ತದೆ. ಗೂಡಿನಬಳಿಯಿಂದ ಎತ್ತರ ಪ್ರದೇಶದಲ್ಲಿರುವ ಮನೆಗಳು ಹಾಗೂ ಟ್ಯಾಂಕ್‌ ಗೆ ಸಂಪರ್ಕ ಕಲ್ಪಿಸುವ ರಸ್ತೆ ಬದಿಯಲ್ಲಿ ಗುಡ್ಡ ಕುಸಿದಿದೆ.

ಕೆಲ ತಿಂಗಳ ಹಿಂದೆ ಇಲ್ಲಿ ಗುಡ್ಡ ಕುಸಿತ ಉಂಟಾದಾಗ ತಹಸೀಲ್ದಾರ್ ಸೂಚನೆಯಂತೆ ಎಂಜಿನಿಯರ್ ಪರಿಶೀಲನೆ ನಡೆಸಿ ಮರಳು ತುಂಬಿದ ಗೋಣಿ ಚೀಲಗಳನ್ನು ಇಡಲಾಗಿತ್ತು. ಸಾವಿರಾರು ಗೋಣಿಗಳನ್ನು ಒಂದರ ಮೇಲೊಂದರಂತೆ ಇಡಲಾಗಿದ್ದು, ಆದರೆ ಇದೀಗ ಬಿಸಿಲಿನ ತೀವ್ರತೆಗೆ ಗೋಣಿಗಳು ಹರಿದು ಮರಳು ಕೆಳಗೆ ಬೀಳುತ್ತಿವೆ. ಒಂದು ವೇಳೆ ಜೋರಾಗಿ ಮಳೆ ಬಂದು ನೀರು ಒಳ ನುಗ್ಗಿದರೆ ಗೋಣಿಚೀಲಗಳು ಕೂಡ ಕೆಳಗೆ ಬೀಳುವ ಸ್ಥಿತಿ ಇದೆ. ರಸ್ತೆಗೆ ತಾಗಿಕೊಂಡೇ ಗುಡ್ಡ ಕುಸಿದಿದ್ದು, ಇನ್ನು ಸ್ಪಲ್ಪ ಕುಸಿದರೂ, ಈ ಭಾಗಕ್ಕೆ ರಸ್ತೆ ಸಂಪರ್ಕ ಕಡಿತಗೊಳ್ಳಲಿದೆ. ಇಲ್ಲಿ ಎರಡು ಕಡೆಗಳಲ್ಲಿ ಗುಡ್ಡ ಕುಸಿದಿದ್ದು, ಎರಡೂ ಕಡೆಯೂ ಗೋಣಿ ಚೀಲಗಳನ್ನು ಇಡಲಾಗಿದೆ.

ಗೂಡಿನಬಳಿಯಲ್ಲಿ ಗುಡ್ಡದ ಮೇಲ್ಭಾಗದಲ್ಲಿ ಪುರಸಭೆಯ ಹಲವು ವಾರ್ಡ್ ಗಳಿಗೆ ನೀರು ಪೂರೈಕೆ ಮಾಡುವ ಟ್ಯಾಂಕ್ ಇದ್ದು, ಟ್ಯಾಂಕ್ ಗೆ ನೀರು ಪೂರೈಕೆ ಮಾಡುವ ಪೈಪ್ ಹಾಗೂ ಅದರಿಂದ ನೀರು ಪೂರೈಕೆಯಾಗುವ ಟ್ಯಾಂಕ್ ಇದೇ ರಸ್ತೆಯ ತಳಭಾಗದಲ್ಲಿದೆ. ಹೀಗಾಗಿ ಗುಡ್ಡ ಕುಸಿಯುವ ವೇಳೆ ಪೈಪ್ ಲೈನ್ ಸಂಪರ್ಕ ಕಡಿತಗೊಂಡರೆ ನೀರು ಪೂರೈಕೆಗೂ ತೊಂದರೆ ಎದುರಾಗಲಿದೆ. ಸದೃಢ ತಡೆಗೋಡೆ ನಿರ್ಮಾಣಕ್ಕಾಗಿ ಸರಕಾರದಿಂದ ಅನುದಾನಕ್ಕಾಗಿ ಮನವಿ ಮಾಡುತ್ತೇವೆ ಎಂದು ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ಹೇಳಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

19/01/2021 06:13 pm

Cinque Terre

3.55 K

Cinque Terre

0

ಸಂಬಂಧಿತ ಸುದ್ದಿ