ಮುಲ್ಕಿ: ಕಿನ್ನಿಗೋಳಿ -ಕಟೀಲು ಗ್ರಾಮೀಣ ಭಾಗದ ಸಾರ್ವಜನಿಕರ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆಯಿಂದ ಕಿನ್ನಿಗೊಳಿ – ಕಟೀಲು – ಬೆಂಗಳೂರು ವಯಾ ಹಾಸನ ಮಾರ್ಗದ ನಾನ್ ಎಸಿ ಸ್ಲಿಪರ್ ಸಾರಿಗೆ ಯನ್ನು ಪ್ರಯಾಣಿಕರ ಬೇಡಿಕೆಯ ಮೇರೆಗೆ ಆರಂಭಿಸಿದೆ ಎಂದು ಮೂಲ್ಕಿ – ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಕಿನ್ನಿಗೋಳಿ ಬಸ್ ನಿಲ್ದಾಣದಲ್ಲಿ ಕರ್ನಾಟಕರಾಜ್ಯ ರಸ್ತೆ ಸಾರಿಗೆ ಇಲಾಖೆಯ ಕಿನ್ನಿಗೋಳಿ -ಕಟೀಲು ವಯಾ ಮೂಡಬಿದೆರೆ ಬೆಂಗಳೂರು ಬಸ್ ಗೆ ಚಾಲನೆ ನೀಡಿ ಮಾತಾನಾಡಿ ಈ ಬಸ್ ನ ವ್ಯವಸ್ಥೆಯಿಂದ ಕಟೀಲು ಹಾಗೂ ಧರ್ಮಸ್ಥಳ ಎರಡು ಪುಣ್ಯ ಕ್ಷೇತ್ರದ ಯಾತ್ರಿಗಳಿಗೆ ಉಪಯೋಗವಾಗಲಿದೆ ಎಂದು ಹೇಳಿದರು.
ರಾಜ್ಯರಸ್ತೆ ಸಾರಿಗೆ ಇಲಾಖೆಯ ವಿಭಾಗೀಯ ನಿಯಂತ್ರಣಾಧಿಕಾರಿ ಅರುಣ್ ಎಸ್. ವಿ, ವಿಭಾಗೀಯ ಸಂಚಾರ ನಿಯಂತ್ರಣಾಧಿಕಾರಿ ಕಮಲ್ ಕುಮಾರ್, ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರತಿ ನಿತ್ಯ ರಾತ್ರಿ 7.45ಕ್ಕೆ ಮಂಗಳೂರಿನಿಂದ ಹೊರಟು ಮಂಗಳೂರು – ಕಾವೂರು- ಬಜ್ಪೆ- ಕಟೀಲು, 8.30 ಗಂಟೆಗೆ ಕಿನ್ನಿಗೋಳಿ, – ಕಲ್ಲಮುಂಡ್ಕೂರು- ಬಾನಂಗಡಿ- ಸಂಪಿಗೆ- ಮೂಡಬಿದಿರೆ- ಧರ್ಮಸ್ಥಳ -ಹಾಸನ ಮೂಲಕವಾಗಿ ಮರುದಿನ ಬೆಳಿಗ್ಗೆ 5ಗಂಟೆಗೆ ಬೆಂಗಳೂರು ತಲುಪಲಿದೆ.
Kshetra Samachara
11/01/2021 10:34 am