ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕಾಪಿಗುಡ್ಡೆಯಲ್ಲಿ ಬಹುನಿರೀಕ್ಷಿತ ಪೈಪ್ ಲೈನ್ ಕಾಮಗಾರಿಗೆ ಗುದ್ದಲಿ ಪೂಜೆ

ಮಂಗಳೂರು: ಕುಡಿಯುವ ನೀರಿನ ಶಾಶ್ವತ ಪರಿಹಾರ ಕ್ರಮವಾಗಿ ಶನಿವಾರ ಮಂಗಳೂರು ಹೊರವಲಯದ ವಾರ್ಡ್18 ಕಾವೂರು ಕಾಪಿಗುಡ್ಡೆ ಅಕಾಶಭವನದಲ್ಲಿ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಬಹು ನಿರೀಕ್ಷಿತ ನೂತನ ಪೈಪ್ ಲೈನ್ ಕಾಮಗಾರಿಗೆ ಶಾಸಕ ವೈ.ಭರತ್ ಶೆಟ್ಟಿ, ಮೇಯರ್ ದಿವಾಕರ್ ಪಾಂಡೇಶ್ವರ ಹಾಗೂ ಸ್ಥಳೀಯ ಮನಪಾ ಸದಸ್ಯೆ ಗಾಯತ್ರಿ ಎ. ರಾವ್ ಗುದ್ದಲಿ ಪೂಜೆ ನೆರವೇರಿಸಿದರು.

ಮಂಡಲ ಯುವಮೋರ್ಚಾ ಅಧ್ಯಕ್ಷ ಭರತ್ ರಾಜ್ ಕೃಷ್ಣಾಪುರ, ಶಕ್ತಿಕೇಂದ್ರದ ಪ್ರಮುಖರಾದ ಶೇಖರ್ ಕುಲಾಲ್,ಪ್ರಜ್ವಲ್ ಶೆಟ್ಟಿ ,ಬೂತ್ ಅಧ್ಯಕ್ಷ ಲತೀಶ್ ಗಾಣಿಗ, ಪಕ್ಷದ ಪ್ರಮುಖರಾದ ಸಂದೇಶ್ ಶೆಟ್ಟಿ, ಜಯರಾಮ್ ಕೋಟ್ಯಾನ್, ಜಯರಾಮ್ ನಾಯ್ಕ್ ಜಗದೀಶ್ ಅಂಚನ್ ಮತ್ತಿತರರು ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

10/01/2021 11:20 pm

Cinque Terre

7.55 K

Cinque Terre

0

ಸಂಬಂಧಿತ ಸುದ್ದಿ