ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಲೈಟ್ ಹೌಸ್ ಹಿಲ್ ರಸ್ತೆಗೆ ಮೂಲ್ಕಿ ಸುಂದರರಾಮ ಶೆಟ್ಟಿ ಹೆಸರು ನಾಮಕರಣ: ಎಸ್‌ಡಿಪಿಐ ಆಕ್ಷೇಪ

ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ನೂರಾರು ವರ್ಷಗಳ ಇತಿಹಾಸವಿರುವ ಬಾವುಟಗುಡ್ಡೆ ಈದ್ಗಾ ಮಸ್ಜಿದ್ ಗೆ ಹೋಗುವ ಅಂಬೇಡ್ಕರ್ ವೃತ್ತದಿಂದ ಹಂಪನಕಟ್ಟೆ ದಾರಿಗೆ ಸುಂದರರಾಮ ಶೆಟ್ಟಿ ಎಂದು ಹೆಸರನ್ನು ನಾಮಕರಣ ಮಾಡುವುದಕ್ಕೆ ಸರಕಾರ ಆದೇಶ ಹೊರಡಿಸಿರುವ ಕ್ರಮಕ್ಕೆ ಎಸ್ ಡಿಪಿಐ ದ.ಕ. ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದ್ದು, ಆಕ್ಷೇಪ ವ್ಯಕ್ತಪಡಿಸಿದೆ.

ಲೋಬೊ ಅವರು ಶಾಸಕರಾಗಿದ್ದ ಸಂದರ್ಭ ಕಾಂಗ್ರೆಸ್ ಸರ್ಕಾರ ಹೆಸರು ಬದಲಾಯಿಸಲು ಪ್ರಯತ್ನಿಸಿತ್ತು. ಆ ವೇಳೆ ಮುಸ್ಲಿಂ ಮುಖಂಡರು, ಅಲೋಶಿಯಸ್ ಕಾಲೇಜಿನ ಆಡಳಿತ ಮಂಡಳಿ ಮತ್ತು ಸಾರ್ವಜನಿಕರು ಆಕ್ಷೇಪಿಸಿದ್ದರು. ಅಲೋಶಿಯಸ್ ಕಾಲೇಜು ಪರವಾಗಿ ಹೈಕೋರ್ಟ್ ಗೆ ಹೋಗಿ ತಡೆಯಾಜ್ಞೆ ತಂದ ಕಾರಣದಿಂದಾಗಿ ತಟಸ್ಥ ವಾಗಿತ್ತು.

ಸ್ಮಾರ್ಟ್ ಸಿಟಿ ಯೋಜನೆ ಭಾಗವಾಗಿ ಹಲವು ಕಡೆ ಕಾಮಗಾರಿ ನಡೆಯುತ್ತಿದೆ. ಈ ಸಂದರ್ಭ ಐತಿಹಾಸಿಕ ರಸ್ತೆ, ವೃತ್ತಗಳ ಹೆಸರು ಬದಲಾವಣೆ ಮಾಡುತ್ತಿರುವುದನ್ನು ಒಪ್ಪಲು ಸಾಧ್ಯವಿಲ್ಲ.

ಬಿಜೆಪಿ ರಾಜ್ಯ ಸರ್ಕಾರಕ್ಕೆ ನಿಜವಾಗಿಯೂ ಸುಂದರ ರಾಮ ಶೆಟ್ಟಿ ಅವರ ಮೇಲೆ ಅಷ್ಟು ಕಾಳಜಿ ಇದ್ದಿದ್ದರೆ ಕೇಂದ್ರ ಸರ್ಕಾರ ಸುಂದರ ರಾಮ ಶೆಟ್ಟಿಯವರು ಸ್ಥಾಪಿಸಿ, ಬೆಳೆಸಿದ್ದ ವಿಜಯ ಬ್ಯಾಂಕ್ ನ್ನು ಬರೋಡ ಬ್ಯಾಂಕ್ ನೊಂದಿಗೆ ವಿಲೀನಗೊಳಿಸುವಾಗ ಏಕೆ ಮೌನ ವಹಿಸಿದೆ?.

ಈ ರಸ್ತೆಯ ಹೆಸರು ಬದಲಾವಣೆ ಮಾಡಲೇಬೇಕೆಂಬ ಹಂಬಲವಿದ್ದರೆ ಹಲವಾರು ವರ್ಷಗಳ ಇತಿಹಾಸರುವ "ಈದ್ಗಾ ಮಸೀದಿ ರಸ್ತೆ" ಎಂದು ನಾಮಕರಣ ಮಾಡಬೇಕೆಂದು ಎಸ್‌ಡಿಪಿಐ ದ.ಕ. ಜಿಲ್ಲಾದ್ಯಕ್ಷ ಅಥಾವುಲ್ಲಾ ಜೋಕಟ್ಟೆ ಒತ್ತಾಯಿಸಿದ್ದಾರೆ.

Edited By :
Kshetra Samachara

Kshetra Samachara

23/09/2020 02:52 pm

Cinque Terre

10.65 K

Cinque Terre

0

ಸಂಬಂಧಿತ ಸುದ್ದಿ