ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ನಂಬರ್ 75, ಅಗಲೀಕರಣ -ಇಕ್ಕೆಲದಲ್ಲಿ ನೆಲೆಸಿರುವ ಬಾಳ್ತಿಲ ಗ್ರಾಮ ಬಂಟ್ವಾಳ ತಾಲೂಕು,ದ.ಕ.ಜಿಲ್ಲಾ, ನಿವಾಸಿಗಳ ಮನೆ ದಾರಿಯ ಅನಾನುಕೂಲ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ರಸ್ತೆ ನಂಬರ್ 75ರ ಚತುಷ್ಪಥ ಕಾಮಗಾರಿಯನ್ನು ಪ್ರಾರಂಭಿಸಿದ್ದು, ಈಗ ಗುಡುಗು ಸಿಡಿಲು ಮಳೆ ಈ ಭಾಗದಲ್ಲಿ ಪ್ರಾರಂಭ ಆಗಿದೆ ಬಂಟ್ವಾಳ ತಾಲೂಕು,ಬಾಳ್ತಿಲ ಗ್ರಾಮದ ರಸ್ತೆಯ ಇಕ್ಕೆಲಗಳಲ್ಲಿ ವಾಸವಾಗಿರುವ ನಿವಾಸಿಗಳಿಗೆ ಆಗುವ ತೊಂದರೆಗಳನ್ನು ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸಂಪರ್ಕ ರಸ್ತೆ ಸಂಪೂರ್ಣ ಬಂದ್ ಆಗಿದ್ದಲ್ಲದೆ, ಮೊನ್ನೆ ಸುರಿದು ಮಳೆಗೆ ಅಡಿಕೆ ತೋಟದಲ್ಲಿ ಮಳೆ ನೀರು ಕೆಸರು ತುಂಬಿ ಸಂಪೂರ್ಣ ಅಡಿಕೆ ಫಸಲು ನೆಲಕಚ್ಚುವ ಭೀತಿ ಎದುರಾಗಿದೆ.
ಗೋಪಾಲ ಶಾಸ್ತ್ರಿ ತನ್ನ ಕೂವೆಕೋಡಿ ನಿವಾಸಕ್ಕೆ ಹೋಗುವ ಸಂಪೂರ್ಣ ರಸ್ತೆ ಸಂಪರ್ಕಯನ್ನ ಕಳೆದು ಕೊಂಡುದ್ದಲ್ಲದೆ, ಕೃಷಿಭೂಮಿಯಲ್ಲಿ ಇರುವ ಅಡಿಕೆ ತೆಂಗು ಬಾಳೆ , ಕರಿಮೆಣಸು , ಕ್ರಿಷಿ ಮಳೆನೀರು ಕೆಸರು ತುಂಬಿ ಫಸಲು ನೆಲಕಚ್ಚುವ ಭೀತಿ ಎದುರಾಗಿದೆ. ಈ ಬಗ್ಗೆ ಸುಮಾರು ,20 ರಿಂದ 25 ಅಡಿ ಎತ್ತರಕ್ಕೆ ,ಸ್ಲೋಪ್ ನಿರ್ಮಾಣ ಮಾಡಲು ಹಾಕಿದ ಮಣ್ಣು ಅಡಿಕೆ,ತೆಂಗು,ಬಾಳೆ,ಕರಿಮೆಣಸು, ಬೆಳೆ ಬೆಳೆಯುವ ತೋಟಕ್ಕೆ ನೀರು ಕೆಸರು ತುಂಬಿ ಕುಸಿಯುವ ಭೀತಿ ಎದುರಾಗಿದೆ.
ಬಾಯ್ದೆರೆ, ಪತ್ರ ಮುಖೇನ ವಿನಂತಿಸಿದರೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಹಿರಿಯ ನಾಗರಿಕ ಗೋಪಾಲ ಶಾಸ್ತ್ರಿ ಆರೋಪಿಸಿದ್ದಾರೆ.
ಸೂರಿಕುಮೇರಿಯಲ್ಲಿ ಸಣ್ಣ ಹೋಟೆಲ್ ನಡೆಸುವವರು, ಶಾಲೆಗೆ ತೆರಳುವ ಮಕ್ಕಳು, ಸ್ಥಳ ಸಿಗದೆ ಚಿಂತಾಕ್ರಾಂತರಾಗಿದ್ದಾರೆ.
ಈ ಬಗ್ಗೆ ,ಕೆ.ಯನ್.ಆರ್.ಕನ್ಷಕ್ಷನ್ ಕಂಪೆನಿಯ , ಪ್ರೊಜೆಕ್ಟ್ ಮೇನೇಜರ್, ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಪ್ರೊಜೆಕ್ಟ್ ಮೇನೇಜರ್ , ಮಂಗಳೂರು, ಬೆಂಗಳೂರು ಅಧಿಕಾರಿ ಗಳಿಗೆ,ಮಳೆ ಪ್ರಾರಂಭದ ಮೊದಲೇ ಮನವಿ ಸಲ್ಲಿಸಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದವರು ಪತ್ರದಲ್ಲಿ ವಿವರಿಸಿದ್ದು, ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.
Kshetra Samachara
01/06/2022 05:45 pm