ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು: ಕರಾವಳಿ ಶೈಲಿಯಲ್ಲಿ ನೇಜಿ ನೆಟ್ಟು ಗದ್ದೆ ಸಾಗುವಳಿ; ಮುಂದಿನ ಪೀಳಿಗೆ ಮರೆಯದಿರಲಿ ಈ ಬಳುವಳಿ

ಮುಲ್ಕಿ: ಲಯನ್ಸ್ ಕ್ಲಬ್ ಕಟೀಲ್ ಎಕ್ಕಾರ್ ತಂಡ ಭಾನುವಾರ ಕಟೀಲಿನ ಪ್ರಗತಿಪರ ಕೃಷಿಕ ಜಾನ್ ಡಿಸೋಜ ಅವರ ಗದ್ದೆಯಲ್ಲಿ ಕರಾವಳಿ ಪದ್ಧತಿಯಲ್ಲಿ ನೇಜಿ ನೆಡುವ(ಇಡೆ ಕೊಳಕೆ ಬೆಳೆ) ಮೂಲಕ ಗದ್ದೆ ಸಾಗುವಳಿ ಮಾಡಿದರು.

ಕಟೀಲು ಎಕ್ಕಾರು ಲಯನ್ಸ್ ಅಧ್ಯಕ್ಷ ಸ್ಟ್ಯಾನಿ ಪಿಂಟೋ ನೇತೃತ್ವದಲ್ಲಿ ಲಯನ್ಸ್ ನ ಸದಸ್ಯರು ಹಾಗೂ ಸ್ಥಳೀಯ ಮಹಿಳಾ ಕೃಷಿಕರು ಪಾಲ್ಗೊಂಡು ಗದ್ದೆ ನೇಜಿ ನೆಟ್ಟು ಸಂಪೂರ್ಣಗೊಳಿಸಿದರು. ಕೃಷಿಕರಾದ ಜಾನ್ ಮತ್ತು ಅವರ ಪತ್ನಿ, ಕೃಷಿ ಕೆಲಸದಲ್ಲಿ ತೊಡಗಿದವರಿಗೆ ಚಾ- ತಿಂಡಿ ಹಾಗೂ ಮಧ್ಯಾಹ್ನದ ಭೋಜನ ವ್ಯವಸ್ಥೆ ಮಾಡಿದರು.

ಅವರು ಮಾತನಾಡಿ, ಕೃಷಿಗೆ ಪ್ರೋತ್ಸಾಹ ನೀಡುವ ಮೂಲಕ ಲಯನ್ಸ್ ಕ್ಲಬ್ ನ ಸದಸ್ಯರು ಹಿಂದಿನ ಕೃಷಿ ಪದ್ಧತಿಯನ್ನು ಇಂದಿನ ಯುವಜನಾಂಗಕ್ಕೆ ತಿಳಿಸಿ ಕೊಡಬೇಕಾಗಿದೆ ಎಂದರು.

ಕಟೀಲು ಎಕ್ಕಾರು ಲಯನ್ಸ್ ಕ್ಲಬ್ ಅಧ್ಯಕ್ಷ ಸ್ಟ್ಯಾನಿ ಪಿಂಟೋ ಮಾತನಾಡಿ, ಕೊರೊನಾ ಲಾಕ್ ಡೌನ್ ದಿನಗಳಲ್ಲಿ ಪರಿಶ್ರಮಿ ಯುವಕರು ಕೃಷಿ ಕಾರ್ಯದಲ್ಲಿ ತೊಡಗಿಸಿ ಮಾದರಿಯಾಗಿದ್ದು, ಮುಂದಿನ ದಿನಗಳಲ್ಲಿ ಅಕ್ಕಿ ಮುಡಿ ಕಟ್ಟುವ ಮಾಹಿತಿ ಕಾರ್ಯಾಗಾರ ಲಯನ್ಸ್ ಕ್ಲಬ್ ಮೂಲಕವೇ ನಡೆಸಲಾಗುವುದು, ಇದು ಯುವಜನರಿಗೆ ಪ್ರಯೋಜನ ವಾಗಲಿದೆ ಎಂದರು.

Edited By : Vijay Kumar
Kshetra Samachara

Kshetra Samachara

20/12/2020 08:11 pm

Cinque Terre

4.46 K

Cinque Terre

0

ಸಂಬಂಧಿತ ಸುದ್ದಿ