ಮಂಗಳೂರು: ಪ್ರಸಕ್ತ ಸಾಲಿನಲ್ಲಿ ಹೊಸದಾಗಿ/ ನವೀಕರಣದ ವಿಶೇಷಚೇತನರ ರಿಯಾಯತಿ ಬಸ್ ಪಾಸ್‌ಗಾಗಿ ಜ.1ರಿಂದ ಡಿ.31ರ ವರೆಗೆ ಸರ್ಕಾರ ನಿಗದಿ ಪಡಿಸಿರುವ ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ವಿಶೇಷಚೇತನ ಅರ್ಜಿದಾರರು ಆನ್ ಲೈನ್ ನಲ್ಲಿ ತಮ್ಮ ವಿವರ ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಜೆಪಿಜೆ ಅಥವಾ ಪಿಡಿಎಫ್ ನಲ್ಲಿ ಅಪ್‌ಲೋಡ್ ಮಾಡಬೇಕು.
ಬಸ್ ಪಾಸ್ ನವೀಕರಿಸಿಕೊಳ್ಳುವವರು ಕ.ರಾ.ರ.ಸಾ. ನಿಗಮದ ಬಸ್ ನಿಲ್ದಾಣದ ಪಾಸ್ ಕೌಂಟರ್‌ಗಳಲ್ಲಿ ಹಾಗೂ ಹೊಸದಾಗಿ ಪಾಸ್ ಪಡೆಯುವವರು ವಿಭಾಗೀಯ ಕಚೇರಿಯಲ್ಲಿ ಹಣ ಪಾವತಿಸಲು ಅವಕಾಶವಿದೆ.
https://serviceonline.gov.in/karnataka ಹೆಚ್ಚಿನ ಮಾಹಿತಿಗಾಗಿ ಅಥವಾ ದೂ.ಸಂ.: 0824- 2458173, 2455999 ಅಥವಾ ಜಿಲ್ಲಾ ವಿಶೇಷಚೇತನರ ಕಲ್ಯಾಣಾಧಿಕಾರಿ ಕಚೇರಿ ಸಂಪರ್ಕಿಸಲು ಜಿಲ್ಲಾ ವಿಶೇಷಚೇತನರ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.
Kshetra Samachara
07/12/2020 10:57 pm