ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ನಾಳೆ ಭಾರತ್ ಬಂದ್ ; ಹಲವು ಸಂಘ ಸಂಸ್ಥೆಗಳ ಬೆಂಬಲ, ಸಿಟಿ ಬಸ್ ಸಂಚಾರ ನಿರಾಳ

ಮಂಗಳೂರು: ಕೇಂದ್ರ ಸರಕಾರದ ರೈತ ವಿರೋಧಿ ಮಸೂದೆ ಖಂಡಿಸಿ ರೈತ ಸಂಘಟನೆಗಳು ಡಿ.8ರಂದು ದ.ಕ. ಜಿಲ್ಲೆಯಾದ್ಯಂತ ಬಂದ್‌ಗೆ ಕರೆ ನೀಡಿದೆ.

ಬಂದ್‌ಗೆ ವಿಪಕ್ಷ ಸಹಿತ ಕರಾವಳಿ ಕರ್ನಾಟಕ ಜನಾಭಿವೃದ್ಧಿ ವೇದಿಕೆ, ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟ, ಬಂದರು ಶ್ರಮಿಕರ ಸಂಘ, ರೈತ ಸಂಘ, ಹಸಿರು ಸೇನೆ, ಪ್ರಾಂತ ರೈತ ಸಂಘ, ವಿದ್ಯಾರ್ಥಿ, ಯುವ, ದಲಿತ ಸಂಘಟನೆಗಳು ಸೇರಿದಂತೆ ಹಲವು ಸಂಘ ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿವೆ.

ನಾಳಿನ ಬಂದ್‌ ವೇಳೆ ಮಂಗಳೂರು ನಗರ ಸಂಪರ್ಕಿಸುವ ನಂತೂರು, ಕೊಟ್ಟಾರಚೌಕಿ, ಪಂಪ್‌ವೆಲ್‌ನಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಯಲಿದೆ.

ಆದರೆ, ಯಾವುದೇ ಬಲವಂತದ ಬಂದ್ ಇರುವುದಿಲ್ಲ ಎಂದು ತಿಳಿದು ಬಂದಿದೆ.

ಸಿಟಿ ಬಸ್‌ ಗಳು ಎಂದಿನಂತೆಯೇ ಸಂಚರಿಸಲಿವೆ. ಪ್ರಯಾಣಿಕರು ಅನಗತ್ಯ ಗೊಂದಲಕ್ಕೆ ಒಳಗಾಗಬಾರದು ಎಂದು ಮಂಗಳೂರು ಸಿಟಿ ಬಸ್ ಅಸೋಸಿಯೇಶನ್‌ನ ಅಧ್ಯಕ್ಷ ದಿಲ್ ರಾಜ್ ಆಳ್ವ ತಿಳಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

07/12/2020 10:52 pm

Cinque Terre

9.27 K

Cinque Terre

2

ಸಂಬಂಧಿತ ಸುದ್ದಿ