ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಕೆರೆಕಾಡಿನಲ್ಲಿ ಹಿಂದೂ ಮುಂದಾಳುಗಳ ಸಂಸ್ಮರಣೆ

ಮುಲ್ಕಿ: ಮುಲ್ಕಿಯ ಹಿಂದೂ ಸಂಘಟನೆಯ ನಾಯಕ ಕಳೆದ ಕೆಲವು ವರ್ಷಗಳ ಹಿಂದೆ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ದಿ.ಸುಖಾನಂದ ಶೆಟ್ಟಿ ಹಾಗೂ ಪೊಲೀಸರ ಗೋಲಿಬಾರಿಗೆ ಪ್ರಾಣತೆತ್ತ ಪ್ರೇಮ್ ಚಿತ್ರಾಪು, ದಿನೇಶ್ ಬಪ್ಪನಾಡು ಅವರ ಸಂಸ್ಮರಣೆಯನ್ನು ಕೆರೆಕಾಡು ಹಿಂದೂ ಜಾಗರಣ ವೇದಿಕೆಯಿಂದ ಮಂಗಳವಾರ ಕೆರೆಕಾಡು ಸುಖಾನಂದ ವೃತ್ತದಲ್ಲಿ ನಡೆಸಲಾಯಿತು.

ಪಡುಪಣಂಬೂರು ಗ್ರಾಪಂ ಮಾಜಿ ಅಧ್ಯಕ್ಷ ವಿನೋದ್ ಎಸ್.ಸಾಲ್ಯಾನ್ ಬೆಳ್ಳಾಯರು ಮಾತನಾಡಿ, ಮುಲ್ಕಿಯಲ್ಲಿ ಹಿಂದೂ ಸಂಘಟನೆಗಳಿಗೆ ಆಸರೆಯಾಗಿದ್ದ ದಿ. ಸುಖಾನಂದ ಶೆಟ್ಟಿ ಉತ್ತಮ ಸಾಮಾಜಿಕ ಸಂಘಟಕನಾಗಿದ್ದು, ಬಪ್ಪನಾಡಿನ ಬ್ರಹ್ಮಕಲಶೋತ್ಸವ ಸಹಿತ ಅನೇಕ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾಗಿ ಆದರ್ಶಮಯ ವ್ಯಕ್ತಿತ್ವ ಹೊಂದಿದ್ದರು ಎಂದರು.

ಈ ಸಂದರ್ಭ ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಶ್ರೀನಿವಾಸ್ ಆಚಾರ್ಯ, ಬಿಜೆಪಿಯ ಲಕ್ಷ್ಮಣ್ ಪುನರೂರು, ದಿನೇಶ್ ದೇವಾಡಿಗ, ಕೆ.ಸಿ.ಸುಂದರ, ರಾಜೇಶ್ ದೇವಾಡಿಗ, ದಿವೇಶ್ ದೇವಾಡಿಗ, ಐತಪ್ಪ, ರಾಜೇಶ್ ಶೆಟ್ಟಿ, ನಾಗರಾಜ್ ಭಟ್, ಸುನಿಲ್ ಪೂಜಾರಿ, ಪ್ರಶಾಂತ್ ಆಚಾರ್ಯ, ಪ್ರಸಾದ್ ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

01/12/2020 02:02 pm

Cinque Terre

2.99 K

Cinque Terre

0

ಸಂಬಂಧಿತ ಸುದ್ದಿ