ಮಂಗಳೂರು: ಕೇರಳದ ಬೆನ್ನಲ್ಲೇ ಕರ್ನಾಟಕದಲ್ಲಿಯೂ 'ರಿಂಗ್ ಚೆಕ್‌ಡ್ಯಾಂ' ಯೋಜನೆ ಜಾರಿಗೊಳ್ಳುವ ಹಂತದಲ್ಲಿದೆ.
ಈ ಯೋಜನೆಯನ್ನು ವಿಟ್ಲ ಬಳಿಯ ಕೋಡಪದವಿನ ಕೃಷಿಕ ನಿಟಿಲೆ ಮಹಾಬಲೇಶ್ವರ ಭಟ್ 10 ವರ್ಷ ಹಿಂದೆ ತಮ್ಮ ಜಮೀನಿನ ಅಗತ್ಯಕ್ಕೆ ಆವಿಷ್ಕರಿಸಿದ್ದರು. ಇದು ಜಲ ಸಂರಕ್ಷಣೆ, ಸಣ್ಣ ವಾಹನಗಳ ಓಡಾಟ ಸಾಧ್ಯವಿರುವ ಮಾರ್ಗ ಹಾಗೂ ಕಾಯಂ ಸೇತುವೆ ಹೀಗೆ ಬಹೂಪಯೋಗಿಯಾಗಿದೆ.
ಈ ಸಂಬಂಧ ಕೆಡಿಪಿಯ ವಿಶೇಷ ಅಧಿಕಾರಿ ಇ.ಪಿ.ರಾಜ್‌ಮೋಹನ್ ಮಾತನಾಡಿ, ''ಕಾಸರಗೋಡು ಡೆವಲಪ್‌ಮೆಂಟ್ ಪ್ಯಾಕೇಜ್‌ನಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಮೂರು ವರ್ಷಗಳಲ್ಲಿ 3,000 ರಿಂಗ್ ಚೆಕ್‌ಡ್ಯಾಂಗಳನ್ನು ನಿರ್ಮಿಸಲಾಗುವುದು. ಈ ವರ್ಷ 600 ಕಾಮಗಾರಿಗಳನ್ನು ಪೂರ್ತಿಗೊಳಿಸಲು ಉದ್ದೇಶಿಸಲಾಗಿದೆ. ಈಗಾಗಲೇ 384 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಮಾಹಿತಿ ನೀಡಿದ್ದಾರೆ.
ಉಪಯೋಗ ಹೇಗೆ ಗೊತ್ತಾ?:
ಕಾಂಕ್ರೀಟ್ ರಿಂಗ್ ಬಳಸಿ ತೋಡಿಗೆ ಅಡ್ಡಗಟ್ಟ ಹಾಕುವುದರಿಂದ ಮೇಲೆ ದ್ವಿಚಕ್ರ ವಾಹನ, ಆಟೋ ರಿಕ್ಷಾಗಳಂತಹ ವಾಹನಗಳ ಓಡಾಟ ಸಾಧ್ಯವಾಗುತ್ತದೆ. ಮಳೆಗಾಲ ಮುಗಿದ ಬಳಿಕ ಸಿಮೆಂಟ್ ರಿಂಗಿನ ಬಾಯಿಯಲ್ಲಿ ತಗಡು ಶಟರ್‌ಇಳಿಸಿದರೆ ಪರಿಸರದಲ್ಲಿ ತುಂಬಾ ದೂರ ತನಕ ಜಲ ಮಟ್ಟ ವೃದ್ಧಿಯಾಗುತ್ತದೆ.
Kshetra Samachara
23/11/2020 03:49 pm