ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಸ್ತೆಯಲ್ಲಿ ಹರಿಯುತ್ತಿದೆ ಮಲಿನ ನೀರು ಪರಿಸರ ಹಾಳು

ಮುಲ್ಕಿ:ಸುರತ್ಕಲ್ ಬಸ್ ನಿಲ್ದಾಣದ ಬಳಿಯ ಹಳೆ ಮುಖ್ಯ ರಸ್ತೆಯಲ್ಲಿ ಸ್ಥಳೀಯ ವಸತಿ ಸಮುಚ್ಚಗಳ ಒಳಚರಂಡಿ ತ್ಯಾಜ್ಯ ನೀರನ್ನು ರಾತ್ರೋರಾತ್ರಿ ಹರಿ ಬಿಡುತ್ತಿರುವ ಕಾರಣ ಪರಿಸರದಲ್ಲಿ ದುರ್ವಾಸನೆ ವಾತಾವರಣ ಸೃಷ್ಟಿಯಾಗಿದ್ದು ಪರಿಸರದ ಕೆಲವು ಕುಡಿಯುವ ನೀರಿನ ಬಾವಿಗಳ ನೀರು ಮಲಿನವಾಗುವ ಆತಂಕದಲ್ಲಿರುವ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಸತಿ ಸಮುಚ್ಚಯಗಳ ಕೊಳಚೆ ನೀರು ರಸ್ತೆಯಲ್ಲಿ ಬಿಡುವ ಬಗ್ಗೆ ಸ್ಥಳೀಯರು ಸೋಮವಾರ ಮಂಗಳೂರು ಮಹಾ ನಗರ ಪಾಲಿಕೆ ಆರೋಗ್ಯ ವಿಭಾಗ ಅಧಿಕಾರಿಗಳು ಸುರತ್ಕಲ್ ಗೆ ಸಮಸ್ಯೆಗಳ ಪರಿಶೀಲನೆಗೆ ಭೇಟಿ ನೀಡಿದ ಸಂದರ್ಭ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಈ ಭಾಗದ ಸಮಸ್ಯೆ ಪರಿ ಶೀಲನೆಗೆ ಮೇಯರ್ ದಿವಾಕರ್ ಭೇಟಿ ಸಂದರ್ಭ ಈ ತ್ಯಾಜ್ಯ ನೀರನ್ನು ಗುಡ್ಡೆಕೊಪ್ಲ ಸಮುದ್ರಕ್ಕೆ ವಿಸರ್ಜನೆಗೆ ಅನಧಿಕೃತ ಕೊಳವೆ ಹಾಕಿರುವುದನ್ನು ಕೂಡಲೇ ತೆಗೆಯಲು ಹಾಗೂ ಅನಧಿಕೃವಾಗಿ ತ್ಯಾಜ್ಯ ನೀರನ್ನು ಹೊರಗೆ ಬಿಡಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಅದನ್ನು ಉಲ್ಲಂಘಿಸಿ ಈಗ ಶಾಲೆ, ದೇವಸ್ಥಾನ, ನೂರಾರು ಮನೆಗಳಿರುವ ಪ್ರದೇಶದ ರಸ್ತೆಗೆ ಬಿಡಲಾಗುತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರದಿಂದಲೇ ರಸ್ತೆಗೆ ನೀರು ಬಿಡುವುದನ್ನು ನಿಲ್ಲಿಸಲಾಗುವುದು ನೀರನ್ನು ಗಾರ್ಡ ನಗೆ ಬಳಸಲಾಗುವುದು ಎಂದು ಪಾಲಿಕೆ ಆರೋಗ್ಯ ವಿಭಾಗ ನಿರೀಕ್ಷಕ ಸ್ಥಳೀಯರಿಗೆ ಉತ್ತರಿಸಿದರು.

ಅವ್ಯವಸ್ಥೆ ಬಗ್ಗೆ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿ ತ್ಯಾಜ್ಯ ನೀರು ಹೊರಕ್ಕೆ ಬಿಡದಂತೆ ಹಿಂದೆಯೇ ಎಚ್ಚರಿಕೆ ನೀಡಲಾಗಿದೆ. ಈ ಬಗ್ಗೆ ಆಯುಕ್ತರಿಗೆ ಪುನಃ ಸೂಚನೆ ನೀಡಲಾಗುವುದು ಎಂದಿದ್ದಾರೆ.

ಸುರತ್ಕಲ್ ಭಾಗದಲ್ಲಿ ಒಳಚರಂಡಿ ವ್ಯವಸ್ಥೆ ಸರಿಪಡಿಸಬೇಕು. ಬಿಲ್ಡರ್ ಗಳಿಗೆ ಅಗತ್ಯ ಮೂಲ ಸೌಕರ್ಯ ನಿರ್ಮಿಸಬೇಕು ಎಂದು ಬಿಲ್ಡರ್ ಸಂತೋಷ್ ಹೇಳಿದ್ದಾರೆ.

ಪರಿಶೀಲನೆ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಕ ಸುಶಾಂತ್, ಸ್ಥಳೀಯರಾದ ಶೇಖರ್, ರಾಜೇಶ್,. ರಾಘು ಸುವರ್ಣ, ಹರಿ ಮೊದಲಾದವರು ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

29/10/2020 12:43 pm

Cinque Terre

3.98 K

Cinque Terre

0

ಸಂಬಂಧಿತ ಸುದ್ದಿ