ಮುಲ್ಕಿ: ಮಂಗಳೂರು ಹೊರವಲಯದ ಕಾವೂರಿನಲ್ಲಿ ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಪ್ರಾದೇಶಿಕ ಕೇಂದ್ರ ಸ್ಥಾಪನೆಗೆ ಬುಧವಾರ
ಗುದ್ದಲಿ ಪೂಜೆ ನೆರವೇರಿತು.
ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾದ ರಾಷ್ಟ್ರೀಯ ಉಪಾಧ್ಯಕ್ಷ, ಶಾಸಕ ಡಾ.ಭರತ್ ಶೆಟ್ಟಿ, ವೈ ಗುದ್ದಲಿಪೂಜೆ ನೆರವೇರಿಸಿದರು.ಬಳಿಕ ಮಾತನಾಡಿದ ಅವರು ಈ ಹಿಂದೆ ಮಂಗಳೂರಿನಲ್ಲಿ ಪ್ರಾದೇಶಿಕ ಕೇಂದ್ರರಚನೆಗೆ ಪ್ರಯತ್ನ ನಡೆದಿದ್ದು ಕಾರಣಾಂತರಗಳಿಂದ ಸಾಧ್ಯವಾಗಿಲ್ಲ.
ವಿಶ್ವ ವಿದ್ಯಾಲಯದ ಕುಲಪತಿ ಡಾ. ಸಚ್ಚಿದಾನಂದ ಅವರು ಪ್ರಾದೇಶಿಕ ಕೇಂದ್ರ ಸ್ಥಾಪನೆಗೆ ಅನುಮತಿ ನೀಡಿ ಸಹಕಾರ ನೀಡಿದ್ದಾರೆ.
ಇದೀಗ ಮೇರಿಹಿಲ್ ನಲ್ಲಿ ಸೂಕ್ತ ಜಾಗವನ್ನು ಸರಕಾರದ ನಿರ್ದೇಶನದೊಂದಿಗೆ ಜಿಲ್ಲಾಧಿಕಾರಿ ಒದಗಿಸಿದ್ದಾರೆ.
ಪ್ರಾದೇಶಿಕ ಕೇಂದ್ರದಿಂದ ಸ್ಥಳೀಯ ದ.ಕ,ಉಡುಪಿ,ಉತ್ತರಕನ್ನಡ ಚಿಕ್ಕಮಗಳೂರು,ಕೊಡಗು ವೈದ್ಯಕೀಯ, ಅರೆ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಹಾಯವಾಗಲಿದೆ.
ಸುಮಾರು 2 ಎಕರೆ ಪ್ರದೇಶದಲ್ಲಿ ಸುಸಜ್ಜಿತ ಸಿಮ್ಯುಲೇಷನ್ ಸೆಂಟರ್, ಆನ್‌ಲೈನ್ ಲೈಬ್ರೆರಿ, ಡಿಜಿಟಲ್ ಮೌಲ್ಯಮಾಪನ, ಡೆಂಟಲ್ ರಿಸರ್ಚ್ ಸೆಂಟರ್.ಪಿಸಿಯೋಥೆರಪಿ ರಿ-ರಿಹ್ಯಾಬಿಲಿಟೇಷನ್ ಸೆಂಟರ್ ಮತ್ತಿತರ ವ್ಯವಸ್ಥೆಗಳು ಇರಲಿದೆ.
ಇದರ ಜೊತೆಗೆ ಸುಸಜ್ಜಿತ ಸಭಾಂಗಣ, ಆಟದ ಮೈದಾನ, ಷಟಲ್ ಸ್ಯಾನ್, ಬಾಸ್ಕೆಟ್ ಬಾಲ್, ವಾಲಿಬಾಲ್ ಟೇಬಲ್ ಟೆನ್ನಿಸ್ ಮತ್ತಿತರ ಕ್ರೀಡೆಗೆ ಇಂಡೋರ್ ಸ್ಟೇಡಿಯಂ, ದೈಹಿಕ ಕಸರತ್ತಿಗೆ ಜಿಮ್, ಈಜುಕೊಳ ಸೌಲಭ್ಯ ಗಳು ಇರಲಿವೆ. ಈ ಕ್ರೀಡಾಂಗದಲ್ಲಿ ಸ್ಥಳೀಯರಿಗೆ
ಕಡಿಮೆ ಶುಲ್ಕದಲ್ಲಿ ಸೌಲಭ್ಯ ಬಳಕೆಗೆ ಅನುಮತಿ ನೀಡಲಾಗುವುದು ಎಂದರು.
ವಿಶ್ವ ವಿದ್ಯಾಲಯದ ಸೆನೆಟ್ ಹಾಗೂ ಸಿಂಡಿಕೇಟ್ ಸದಸ್ಯ ಡಾ.ಶಿವಚರಣ್ ಶೆಟ್ಟಿ ಮಾತನಾಡಿ ರಾಜ್ಯದ ನಾಲ್ಕು ಕಡೆ ಈ ಪ್ರಾದೇಶಿಕ ಕೇಂದ್ರ ಸ್ಥಾಪನೆಯಾಗಲಿದೆ.ಮಂಗಳೂರಿನಲ್ಲಿ ದೇಶದಲ್ಲೇ ಪ್ರಥಮ ಡೆಂಟಲ್ ರಿಸರ್ಚ್ ಸೆಂಟರ್ ಈ ಕೇಂದ್ರದಲ್ಲಿ ಆರಂಭಿಸಲಾಗುವುದು.
ಬೋಧಕ ವರ್ಗಕ್ಕೆ ತರಬೇತಿ ನೀಡುವ ವ್ಯವಸ್ಥೆಯೂ ಇರಲಿದೆ.ಕೇಂದ್ರದ ಸ್ಥಾಪನೆಯಿಂದ ವಿದ್ಯಾರ್ಥಿಗಳು ಮಂಗಳೂರಿನಲ್ಲೇ ಸೌಲಭ್ಯ ಪಡೆಯಬಹುದು ಎಂದರು.
ಸ್ಫೋಟ್ಸ್ ಕಾಂಪ್ಲೆಕ್ಸ್ ಮತ್ತೊಂದು ಪ್ರಮುಖ ಯೊಜನೆಯಾಗಿದೆ .ಈ ಕೇಂದ್ರ ಸ್ಥಾಪನೆಗೆ ಕಾರಣಕರ್ತರಾದ ಕುಲಪತಿ ಅವರಿಗೆ ಕೃತಜ್ಞತೆ ಅರ್ಪಿಸುವುದಾಗಿ ನುಡಿದರು.
ಕಾರ್ಯಕ್ರಮದಲ್ಲಿ ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಡಾ.ಯು.ಟಿ ಇಫ್ತಿಕರ್ ಆಲಿ,ಡಾ.ದೀಪ್ತಿ ಬಾವಾ, ಡಾ.ರವಿಶಂಕರ್ ಶೆಟ್ಟಿ, ಸೆನೆಟ್ ಸದಸ್ಯರಾದ
ಡಾ. ಶರಣ್ ಜೆ.ಶೆಟ್ಟಿ,ಡಾ.ರಾಜೇಶ್ ಶೆಣೈ, ಭಾಸ್ಕರ್ ಶೆಟ್ಟಿ, ರಣ್ ದೀಪ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
14/10/2020 03:01 pm