ಕಡಬ: ಫೆಡರಲ್ ಬ್ಯಾಂಕಿನ ಸಮೀಪ ಇಲ್ಲಿಯ ಸಿಬ್ಬಂದಿ ಜೆರಿನ್ ಎಂಬವರಿಗೆ ಚಿನ್ನದ ಸರವೊಂದು ಸಿಕ್ಕಿದ್ದು,ಅದನ್ನು ಅವರು ಪತ್ರಕರ್ತ ಪ್ರಕಾಶ್ ಅವರಿಗೆ ತಲುಪಿಸಿದ್ದಾರೆ. ಪ್ರಕಾಶ್ ಅವರು ಸರವನ್ನು ಕಡಬ ಪೊಲೀಸ್ ಠಾಣೆಯ ಎ.ಎಸ್.ಐ ಸುರೇಶ್ ಅವರ ಮೂಲಕ ಕಡಬ ಪೊಲೀಸ್ ಠಾಣೆಗೆ ನೀಡಿರುತ್ತಾರೆ.
ಈ ಚಿನ್ನದ ಸರದ ವಾರಸುದಾರರು ಸರಿಯಾದ ಮಾಹಿತಿ, ತೂಕ ಅಥವಾ ದಾಖಲೆಗಳನ್ನು ನೀಡಿ ಕಡಬ ಪೊಲೀಸ್ ಠಾಣೆಯಿಂದ ಚಿನ್ನದ ಸರವನ್ನು ಪಡೆದುಕೊಳ್ಳಬಹುದು ಎಂದು ಕಡಬ ಠಾಣಾಧಿಕಾರಿ ಆಂಜನೇಯ ರೆಡ್ಡಿ ಅವರು ತಿಳಿಸಿದ್ದಾರೆ.
Kshetra Samachara
13/05/2022 03:46 pm