ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅರಬಿಕ್ ಆಸ್ಟ್ರೋಲಜಿ ವಿಶಾರದರಿಗೆ ಪದವಿ ಪ್ರದಾನ

ಮಂಗಳೂರು :  ಪ್ರತಿಷ್ಠಿತ ಇಬ್ನುಸೀನಾ ಮೆಡಿಕೇಷನ್ ಇನ್ಸ್ಟಿಟ್ಯೂಟ್ ಪಾಲಕ್ಕಾಡ್ ಅವರಿಂದ , ಅರಬಿಕ್ ಆಸ್ಟ್ರೋಲಜಿ (ಇಸ್ಲಾಮಿಕ್ ಸ್ಪ್ರಿಚ್ಯುವಲ್ ಹೀಲಿಂಗ್) ವಿಶಾರದರಿಗೆ ಪದವಿ ಪ್ರದಾನ ಸಮಾರಂಭ ಮತ್ತು ರಾಜ್ಯ ಸಮಾವೇಶವು  ಪಾಣೆಮಂಗಳೂರಿನ ಎಸ್.ಎಸ್. ಆಡಿಟೋರಿಯಂನಲ್ಲಿ ಇತ್ತಿಚೆಗೆ ನಡೆಯಿತು.

ಸೈಯ್ಯದ್ ಹಬೀಬುಲ್ಲಾಹಿ ಪೂಕೋಯ ತಂಙಳ್ ಪೆರುವಾಯಿ ಅಧ್ಯಕ್ಷತೆ ವಹಿಸಿದ್ದರು.

ಸಂಸ್ಥೆಯ ನಿರ್ದೇಶಕ ಡಾ. ಜಮಾಲುದ್ದೀನ್ ಮುಸ್ಲಿಯಾರ್ ಆಲುವ ಉದ್ಘಾಟಿಸಿದರು.

ಇದೇ ಸಂದರ್ಭ 50 ಮಂದಿ ವಿಶಾರದರಿಗೆ ಪದವಿ ಪ್ರದಾನ ಮಾಡಲಾಯಿತು. ಪ್ರಸ್ತುತ ಕಾರ್ಯಕ್ರಮದಲ್ಲಿ ಸಂಸ್ಥೆಯ ಪದವೀಧರರ ಸಂಘಟನೆಯಾದ ಇಲಾಜುಲ್ ಖುರಾನ್ ಆಸೋಸಿಯೇಷನ್ ಓಫ್ ಇಂಡಿಯಾ ಇದರ ಕರ್ನಾಟಕ ರಾಜ್ಯ ಘಟಕವನ್ನು ರಚಿಸಲಾಯಿತು.

ನೂತನ ಅಧ್ಯಕ್ಷರಾಗಿ ಸೈಯ್ಯದ್ ಹಬೀಬುಲ್ಲಾಹಿ ಪೂಕೋಯ ತಙಳ್ ಪೆರುವಾಯಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಯಾಸಿರ್ ಫಾಝಿಲ್ ಪುತ್ತೂರು, ಉಪಾಧ್ಯಕ್ಷರಾಗಿ ಅಸ್ಸೈಯ್ಯದ್ ಫಝಲ್ ಜಮಾಲುಲ್ಲೈಲಿ, ಅಸ್ಸೈಯ್ಯದ್ ಸಿ.ಟಿ.ಎಂ.ಸಲೀಂ ಅಸ್ಸಖಾಫ್, ಉಸ್ಮಾನ್ ಮದನಿ ಕೊಳಕೇರಿ, ಕಾರ್ಯದರ್ಶಿಗಳಾಗಿ ಹುಸೈನ್ ಸಖಾಫಿ ಎರುಮಾಡ್, ಆಬ್ದುಲ್ ಮಜೀದ್ ಅಝ್ಹರಿ ಮೂಡಿಗೆರೆ, ಇಸ್ಹಾಖ್ ಸಖಾಫಿ ನಂದಾವರ ಹಾಗೂ ಕೋಶಾಧಿಕಾರಿಗಳಾಗಿ ಸೈಯ್ಯದ್ ಹಾಮೀಂ ತಙಳ್ ಚಿಕ್ಕಮಗಳೂರು ಅವರನ್ನು ಆರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ  ಐ.ಕ್ಯೂ.ಎ ಕೇರಳ ಘಟಕ ಅಧ್ಯಕ್ಷ ಸೈಯ್ಯದ್ ಫತ್ಹುದ್ದೀನ್ ತಙ್ಙಳ್ ಲಕ್ಷದ್ವೀಪ ಭಾಗವಹಿಸಿದ್ದರು. 

Edited By : Nirmala Aralikatti
Kshetra Samachara

Kshetra Samachara

13/01/2021 01:12 pm

Cinque Terre

4.01 K

Cinque Terre

0

ಸಂಬಂಧಿತ ಸುದ್ದಿ