ಮಂಗಳೂರು:ವಿಶ್ವ ಹಿರಿಯರ ಶೋಷಣಾ ಜಾಗೃತ ದಿನದ ಅಂಗವಾಗಿ ನಗರದ ಹೊರವಲಯದ ಮೇರಿಹಿಲ್ ನಲ್ಲಿರುವ ಎ ಕೆ. ನ್ಯೂರೋ ಕೌನ್ಸಿಲಿಂಗ್ ಸೆಂಟರ್ ನಲ್ಲಿ ನಡೆದ ಕಾರ್ಯಕ್ರಮವನ್ನು ಮಂಗಳೂರು ನಗರ ಉತ್ತರ ಶಾಸಕ ಡಾ.ಭರತ್ ಶೆಟ್ಟಿಯವರು ಉದ್ಘಾಟಿಸಿದರು*
ಈ ಸಂದರ್ಭ ಅವರು ಮಾತನಾಡಿ, ವಿವಿಧ ಕಾರಣಗಳಿಗಾಗಿ ಹಿರಿಯರು ಶೋಷಣೆಗೆ ಒಳಗಾಗಿ ಮಾನಸಿಕ ಒತ್ತಡ ಅನುಭವಿಸುತ್ತಾರೆ.ಇದರಿಂದಾಗಿ ಮರೆವು,ಆಘಾತ ಮತ್ತಿತರ ಅನಾರೋಗ್ಯಕರ ಮನಸ್ಥಿತಿ ಬೆಳೆಯುತ್ತದೆ.
ಆಸ್ತಿ,ಹಣದ ಹಿಂದೆ ಬಿದ್ದ ಮಕ್ಕಳು ತಮ್ಮ ಪೋಷಕರ ಬಗ್ಗೆ ಮಮತೆ ,ಪ್ರೀತಿ ವಾತ್ಸಲ್ಯ ತೋರುವುದು ಬಿಟ್ಟು ಸಂಪತ್ತಿನ ಮೇಲೆ ಕೇಂದ್ರೀಕರಿಸುತ್ತಾರೆ ಎಂದು ವಿಷಾದ ವ್ಯಕ್ತ ಪಡಿಸಿದರಲ್ಲದೆ, ಮಾನಸಿಕ ತಜ್ಞರಾದ ಡಾ.ಕಿರಣ್ ಕುಮಾರ್ ಅವರು ಹಿರಿಯರ ಶೋಷಣೆ ಮುಕ್ತ ಜಾಗೃತಿ ದಿನ ಆಚರಣೆ ಅರ್ಥ ಪೂರ್ಣವಾಗಿ ಆಯೋಜಿಸಿದ್ದಾರೆ ಎಂದು ಶ್ಲಾಘಿಸಿದರು.
ಹಿರಿಯರಿಗೆ ಕೌನ್ಸಿಲಿಂಗ್ ನೀಡುವ ಕಾರ್ಯಕ್ರಮ ವಯೋ ಮಾನಸ ಸಂಜೀವಿನಿ ಕಾರ್ಯಕ್ರಮ ಹಾಗೂ ಕ್ಲಿನಿಕಲ್ ಲೋಗೋ ಉದ್ಘಾಟನೆ ನೆರವೇರಿಸಿದರು.
ಈ ಸಂದರ್ಭ ನಿಮಾನ್ಸ್ ನ ವೈದ್ಯರಾದ ಡಾ.ಪಿ.ಟಿ ಶಿವಕುಮಾರ್,ಡಾ.ವಿಜಯ್ ಬಾರ್ಬಿ ಶೆಟ್ಟರ್,ಡಾ.ಕೆ.ಪಿ ಶೆಣೈ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
Kshetra Samachara
15/06/2022 12:22 pm