ಮುಲ್ಕಿ: ಮುಲ್ಕಿ ಸಮೀಪದ ಪಡುಪಣಂಬೂರು ಕಾರ್ಯಕ್ಷೇತ್ರದ ತೋಕೂರು ಗ್ರಾಮದ ಸುಬ್ರಹ್ಮಣ್ಯ ಸಂಘದ ಸದಸ್ಯರಾದ ಲಕ್ಷ್ಮಿ ಅವರ ತಂದೆಯ ವೈದ್ಯಕೀಯ ವೆಚ್ಚಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಂಜೂರಾದ 10000 ರೂ.ನ ಚೆಕ್ ನ್ನು ಮುಲ್ಕಿ ವಲಯದ ಮೇಲ್ವಿಚಾರಕ ಚಂದ್ರಶೇಖರ ವಿತರಿಸಿದರು.
ಸೇವಾ ಪ್ರತಿನಿಧಿ ಸವಿತಾ ಬೆಳ್ಳಾಯರು, ಒಕ್ಕೂಟದ ಅಧ್ಯಕ್ಷೆ ಲತಾ, ಮಾಜಿ ಅಧ್ಯಕ್ಷ ಕರುಣಾಕರ ಉಪಸ್ಥಿತರಿದ್ದರು.
Kshetra Samachara
22/01/2021 10:59 pm