ಬೆಳ್ತಂಗಡಿ: ತಾಲೂಕಿನ ಮಚ್ಚಿನ ಗ್ರಾ.ಪಂ.ನಲ್ಲಿ ಶುಕ್ರವಾರ ಜಲಜೀವನ್ ಮಿಷನ್ ಕಾರ್ಯ ಚಟುವಟಿಕೆಯಡಿ ಸಮುದಾಯ ಸಂಸ್ಥೆ ವತಿಯಿಂದ ಗ್ರಾಮೀಣ ಸಹಭಾಗಿತ್ವ ಕಾರ್ಯಕ್ರಮ ನಡೆಯಿತು.
ಜೆಜೆಎಮ್ ಐಇಸಿ/ಹೆಚ್.ಆರ್.ಡಿ. ಜಿಲ್ಲಾ ಮುಖ್ಯಸ್ಥ ಶಿವರಾಮ ಪಿ.ಬಿ. ಗ್ರಾಮ ಕ್ರಿಯಾ ಯೋಜನೆ ಮತ್ತು ಪಿ.ಆರ್.ಎ. ಕುರಿತು ಮಾಹಿತಿ ನೀಡಿದರು. ಗ್ರಾಪಂ ಆವರಣದಲ್ಲಿ ಗ್ರಾಮಸ್ಥರ ಸಹಕಾರದಲ್ಲಿ ನಕ್ಷೆ ಬಿಡಿಸಿ ಗ್ರಾಮದ ಸಂಪೂರ್ಣ ಚಿತ್ರಣ ಬಿತ್ತರಿಸಲಾಯಿತು. ಪಿಡಿಒ ಗೌರಿಶಂಕರ್ , ನೂತನ ಪಂಚಾಯತ್ ಸದಸ್ಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕಿಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ಜೆಜೆಎಮ್ ಸಿಬ್ಬಂದಿ ಚರಣ್ ರಾಜ್, ಫಲಹಾರೇಶ್, ಮಹಾಂತೇಶ್, ರಘುಚಂದ್ರ ಶೆಟ್ಟಿ,ಸದಾಶಿವ,ಈಶ್ವರ್ ಸಹಕರಿಸಿದರು.
Kshetra Samachara
15/01/2021 08:45 pm