ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಗ್ರಾಮಾಂತರದ ಶಾಲೆಗಳಲ್ಲಿ ಕೊರೊನಾ ಜಾಗೃತಿ ಜೊತೆಗೆ ಗುಣಮಟ್ಟದ ಶಿಕ್ಷಣ ಶ್ಲಾಘನೀಯ"

ಮುಲ್ಕಿ: ಮುಲ್ಕಿ ರೋಟರಿ ಕ್ಲಬ್ ವತಿಯಿಂದ ಅಧ್ಯಕ್ಷ ಅಶೋಕ್ ಶೆಟ್ಟಿ ನೇತೃತ್ವದಲ್ಲಿ ಮುಲ್ಕಿ ಸಮೀಪದ ಕೊಲಕಾಡಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ಥರ್ಮಲ್ ಸ್ಕ್ಯಾನರ್ ಮತ್ತು ಮಕ್ಕಳಿಗೆ ಮಾಸ್ಕ್ ಉಚಿತವಾಗಿ ವಿತರಿಸಲಾಯಿತು.

ಈ ಸಂದರ್ಭ ಅವರು ಮಾತನಾಡಿ, ಗ್ರಾಮೀಣ ಪ್ರದೇಶಗಳ ಶಿಕ್ಷಣ ಸಂಸ್ಥೆಗಳು ಕೊರೊನಾ ಜಾಗೃತಿ ಜೊತೆಗೆ ಉತ್ತಮ ಗುಣಮಟ್ಟದ ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿದ್ದು, ಸರಕಾರದ ಅನುದಾನ ಹಾಗೂ ಪ್ರೋತ್ಸಾಹ ಮುಖ್ಯ ಎಂದರು.

ಮುಲ್ಕಿ ರೋಟರಿ ಕ್ಲಬ್ ಕಾರ್ಯದರ್ಶಿ ವೈ.ಎನ್. ಸಾಲ್ಯಾನ್, ಮುಖ್ಯಶಿಕ್ಷಕ ಅಂಬರೀಶ ಲಮಾಣಿ, ಶಿಕ್ಷಕಿಯರಾದ ಶಕುಂತಲಾ ಶೆಟ್ಟಿ, ವೈಷ್ಣವಿ ಕಾಮತ್, ಮಿಥಿಲಾಕ್ಷಿ, ರೇಖಾ ಮತ್ತಿತರರು ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

01/01/2021 03:49 pm

Cinque Terre

4.39 K

Cinque Terre

0

ಸಂಬಂಧಿತ ಸುದ್ದಿ