ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಬ್ರಿಟನ್ ನಿಂದ ಮತ್ತೆ 8 ಮಂದಿ ದ.ಕ. ಜಿಲ್ಲೆಗೆ ಆಗಮನ

ಮಂಗಳೂರು: ಇಂಗ್ಲೆಂಡ್‌ನಲ್ಲಿ ರೂಪಾಂತರಿತ ಕೊರೊನಾ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಎಚ್ಚರವಹಿಸಲಾಗಿದ್ದು, ಬ್ರಿಟನ್ ನಿಂದ ಮತ್ತೆ ಎಂಟು ಮಂದಿ ದ.ಕ. ಜಿಲ್ಲೆಗೆ ಆಗಮಿಸಿದ್ದಾರೆ. ಈ ಎಲ್ಲರನ್ನೂ ಇದೀಗ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ‌ ನೀಡಿದೆ.

ಈ ಎಂಟು ಮಂದಿಯ ವರದಿ ಶುಕ್ರವಾರ ಬರಲಿದೆ. ಬ್ರಿಟನ್‌ನಿಂದ ಜಿಲ್ಲೆಗೆ ಆಗಮಿಸಿದ ಎಲ್ಲರ ಪರೀಕ್ಷೆ ನಡೆಸಲಾಗಿದ್ದು, ಎಲ್ಲರ ವರದಿಯೂ ನೆಗೆಟಿವ್ ಬಂದಿದೆ‌ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ತಿಳಿಸಿದ್ದಾರೆ. ಈ ಮೊದಲು ಬ್ರಿಟನ್‌ನಿಂದ 66 ಮಂದಿ ದ.ಕ. ಜಿಲ್ಲೆಗೆ ಬಂದಿದ್ದರು.

Edited By : Vijay Kumar
Kshetra Samachara

Kshetra Samachara

25/12/2020 07:22 am

Cinque Terre

12.05 K

Cinque Terre

0

ಸಂಬಂಧಿತ ಸುದ್ದಿ