ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ನರಿಕೊಂಬು ಗ್ರಾಮದ 120 ಮಂದಿಗೆ ಆಹಾರ ಕಿಟ್ ವಿತರಣೆ

ಬಂಟ್ವಾಳ: ಮಂಗಳೂರು ರಥಬೀದಿಯ ಡಾ. ಪಿ.ದಯಾನಂದ ಪೈ, ಪಿ.ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ಘಟಕದ ಮೂಲಕ ಮಂಗಳೂರು ಇಸ್ಕಾನ್ ನ ಅಕ್ಷಯ ಪಾತ್ರೆ ಕೊಡುಗೆಯಾಗಿ ನೀಡಿದ ಆಹಾರ ಕಿಟ್ ಅನ್ನು ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ಸಭಾಂಗಣದಲ್ಲಿ 120 ಮಂದಿಗೆ ವಿತರಿಸಲಾಯಿತು.

ಅಕ್ಷಯ ಪಾತ್ರೆಯ ದ.ಕ. ಉಡುಪಿ ಕೋವಿಡ್ ರಿಲೀಫ್ ಸಂಯೋಜಕ ಹಾಗೂ ಇಸ್ಕಾನ್ ದೇವಸ್ಥಾನದ ಕಾರ್ಯದರ್ಶಿ ಸನಂದನ ದಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆಹಾರ ಎನ್ನುವುದು ದೇವರು ಕೊಟ್ಟ ಕೊಡುಗೆ. ದೇವರ ಪ್ರಸಾದ ಹಂಚುವ ಕಾರ್ಯ ಇಸ್ಕಾನ್ ಮಾಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಇಸ್ಕಾನ್ ಅಕ್ಷಯಪಾತ್ರೆ ಸಂಯೋಜಕ ಸಂತೋಷ್, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಪರಿಷತ್ತಿನ ಜಿಲ್ಲಾಧ್ಯಕ್ಷ ವೇದಮೂರ್ತಿ ಕರ್ಬೆಟ್ಟು ಕೃಷ್ಣರಾಜ ಭಟ್ , ಸ್ಥಳೀಯ ವೈದ್ಯ ಡಾ. ಸುಬ್ರಹ್ಮಣ್ಯ ಟಿ. ಉಪಸ್ಥಿತರಿದ್ದರು.

ಮಂಗಳೂರು ರಥಬೀದಿಯ ಡಾ. ಪಿ.ದಯಾನಂದ ಪೈ, ಪಿ.ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಿನ್ಸಿಪಾಲ್ ಪ್ರೊ. ರಾಜಶೇಖರ ಹೆಬ್ಬಾರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.

ಕಾಲೇಜಿನ ರೋವರ್ಸ್ ಘಟಕದ ಸಂಯೋಜಕ ಪ್ರೊ. ಪುರುಷೋತ್ತಮ ಭಟ್ ನಿರೂಪಿಸಿದರು. ರೇಂಜರ್ಸ್ ಘಟಕ ಸಂಯೋಜಕಿ ಡಾ. ಶೈಲಾರಾಣಿ ವಂದಿಸಿದರು. ಮಹಿತಾ ಭಟ್ ಪ್ರಾರ್ಥಿಸಿದರು.

Edited By : Nirmala Aralikatti
Kshetra Samachara

Kshetra Samachara

24/10/2020 04:59 pm

Cinque Terre

9.55 K

Cinque Terre

0

ಸಂಬಂಧಿತ ಸುದ್ದಿ