ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅದನ್ನು ತಡೆಯುವ ಅಂಗವಾಗಿ ದ.ಕ. ಜಿಪಂ ಹೊಸ ಯೋಜನೆ ಹಾಕಿಕೊಂಡಿದೆ.
ಅದರಂತೆ ಜಿಲ್ಲೆಯ ಒಟ್ಟು 224 ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಸ್ಥರನ್ನು ಕೋವಿಡ್ ತಪಾಸಣೆಗೆ ಒಳಪಡುವಂತೆ ಆದೇಶಿಸಿದೆ.
ತಾಲೂಕುಗಳಲ್ಲಿರುವ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಆಯಾಯ ಗ್ರಾಮಸ್ಥರು ಬಂದು ಕೋವಿಡ್ ತಪಾಸಣೆಗೆ ಒಳಗಾಗಬೇಕಿದೆ. ಈ ಸಂಬಂಧ ಎಲ್ಲಾ ಜವಾಬ್ದಾರಿಗಳನ್ನು ಆಯಾಯ ತಾಲೂಕು, ಹೋಬಳಿಯ ವೈದ್ಯಾಧಿಕಾರಿಗಳೇ ವಹಿಸಿಕೊಳ್ಳಬೇಕೆಂದು ಜಿ.ಪಂ. ಆದೇಶದಲ್ಲಿ ತಿಳಿಸಿದೆ.
ಸೆ.28 ರಿಂದ ಆರಂಭವಾಗಲಿರುವ ಈ ತಪಾಸಣೆ ಪ್ರಕ್ರಿಯೆ ಯಾವ ಕೇಂದ್ರಗಳಲ್ಲಿ ಯಾವ ಗ್ರಾಮಸ್ಥರು ತಪಾಸಣೆ ನಡೆಸಬೇಕು ಎಂದೂ ಅದು ತಿಳಿಸಿದೆ.
ಅಲ್ಲದೆ, ಆಯಾಯ ಪಂಚಾಯತ್ ಗಳು ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರ ಪ್ರಕಟಣೆ ತಿಳಿಸಿದೆ.
Kshetra Samachara
25/09/2020 12:53 pm