ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿ.ಸಿ.ರೋಡ್- ಗುಂಡ್ಯ ರಾಷ್ಟ್ರೀಯ ಹೆದ್ದಾರಿ ಸುವ್ಯವಸ್ಥೆಗೆ ಮೊರೆ

ಕಡಬ: ಮಂಗಳೂರು- ಬೆಂಗಳೂರು ರಾ.ಹೆ. ಅವ್ಯವಸ್ಥೆ ಯಿಂದ ಕೂಡಿದ್ದು, ಬಿ.ಸಿ ರೋಡ್ ನಿಂದ ಗುಂಡ್ಯ ವರೆಗಿನ ರಸ್ತೆಯಂತೂ ಸಂಪೂರ್ಣ ಹೊಂಡಾಗುಂಡಿಮಯವಾಗಿದೆ.

ಕೂಡಲೇ ರಸ್ತೆಯನ್ನು ಸರಿಪಡಿಸುವಂತೆ ನೀತಿ ಸಾಮಾಜಿಕ ಸಂಘಟನೆ ವತಿಯಿಂದ ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಯಿತು.

ಮಂಗಳೂರು- ಬೆಂಗಳೂರು ರಾ.ಹೆ. 75 ರ ಅವ್ಯವಸ್ಥೆ ಬಗ್ಗೆ ಈ ಹಿಂದಿನಿಂದಲೂ ಹಲವಾರು ಹೋರಾಟ, ಪ್ರತಿಭಟನೆ ನಡೆಸಲಾಗಿದ್ದರೂ ಈ ತನಕ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ.

ಇದರಿಂದಾಗಿ ವಾಹನ ಸವಾರರು ಸಂಕಟ ಪಡುವಂತಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ನೀತಿ ಸಾಮಾಜಿಕ ತಂಡದಿಂದ ಕಡಬ ಉಪ ತಹಸೀಲ್ದಾರ್ ಮನೋಹರ್ ಅವರ ಮುಖಾಂತರ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ಕಡಬ ಕಂದಾಯ ನಿರೀಕ್ಷಕ ಅವಿನ್ ರಂಗತಮಲೆ ಉಪಸ್ಥಿತರಿದ್ದರು.

ನೀತಿ ಸಾಮಾಜಿಕ ಸಂಘಟನೆ ಜಿಲ್ಲಾ ಅಧ್ಯಕ್ಷ ಜೋಸ್ ಥಾಮಸ್, ಕಡಬ ನೀತಿ ಸಮಿತಿ ಅಧ್ಯಕ್ಷ ರಂಜಿತ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

Edited By : Nirmala Aralikatti
Kshetra Samachara

Kshetra Samachara

24/10/2020 10:40 pm

Cinque Terre

3.1 K

Cinque Terre

0

ಸಂಬಂಧಿತ ಸುದ್ದಿ