ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಸೇವಾಮನೋಭಾವ ಕಾರ್ಯಕ್ರಮಗಳು ನಿರಂತರವಾಗಲಿ: ಹರಿಕೃಷ್ಣ ಪುನರೂರು

ಮುಲ್ಕಿ ರಜತ ಮಹೋತ್ಸವದ ಸಂಭ್ರಮದಲ್ಲಿರುವ ಮುಲ್ಕಿ ರೋಟರಿ ಕ್ಲಬ್ ನ ವಿಜ್ಞಾಪನಾ ಪತ್ರ ವನ್ನು ಕಸಾಪ ಮಾಜೀ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಬಿಡುಗಡೆಗೊಳಿಸಿದರು.

ಈ ಸಂದರ್ಭ ಅವರು ಮಾತನಾಡಿ ಮುಲ್ಕಿ ರೋಟರಿ ಕ್ಲಬ್ ನಿಂದ ಅನೇಕ ಸೇವಾಮನೋಭಾವ ಕಾರ್ಯಕ್ರಮಗಳು ನಡೆದಿದ್ದು ಸಮಾಜದಲ್ಲಿರುವ ಕಟ್ಟಕಡೆಯ ವ್ಯಕ್ತಿಗೆ ಸವಲತ್ತುಗಳನ್ನು ಸಿಗಲು ಮತ್ತಷ್ಟು ಶ್ರಮಿಸಬೇಕಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ರೋಟರಿ ಕ್ಲಬ್ ಅಧ್ಯಕ್ಷ ಶಿವರಾಮ್ ಜಿ ಅಮೀನ್ ವಹಿಸಿದ್ದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ರೊ. ಪಿಎಚ್ಎಫ್ ಅಶೋಕ್ ಕುಮಾರ್ ಶೆಟ್ಟಿ, ಜಿನರಾಜ್ ಸಾಲ್ಯಾನ್, ಲಿಯಾಕತ್ ಆಲಿ, ನಿಯೋಜಿತ ಸಹಾಯಕ ಗವರ್ನರ್ ನಾರಾಯಣ್, ಕಾರ್ಯದರ್ಶಿ ರವಿಚಂದ್ರ, ಮಲ್ಲಿಕಾರ್ಜುನ ಆರ್.ಕೆ. ಮತ್ತಿತರರು ಉಪಸ್ಥಿತರಿದ್ದರು

. ಶಿವರಾಮ ಜಿ ಅಮೀನ್ ಸ್ವಾಗತಿಸಿದರು. ನರೇಂದ್ರ ಕೆರೆಕಾಡು ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

08/10/2021 08:19 pm

Cinque Terre

9.38 K

Cinque Terre

0