ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಳೆಯಂಗಡಿ: ಶಿಕ್ಷಣ ಸಂಸ್ಥೆಗಳು ವ್ಯಾಪಾರಿಕರಣದ ಕೇಂದ್ರವಾಗಿರದೇ ಸೇವಾ ಕೇಂದ್ರವಾಗಿರಬೇಕು

ಮುಲ್ಕಿ:ದೇಶದಲ್ಲಿ ಬಡತನ ನಿರ್ಮೂಲವಾಗುತ್ತಿದೆ ಎಂದಾದರೆ, ಕ್ರೈಸ್ತ ಮಿಷನರಿಗಳು ರೂಪಿಸಿದ ಶಿಕ್ಷಣದ ನೀತಿ ಕಾರಣ. ಕ್ರೈಸ್ತ ಮಿಷನರಿಗಳು ಸ್ವಾತಂತ್ರ್ಯ ಪೂರ್ವದಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆದು ಅಸಂಘಟಿತ ಸಮಾಜವು ಶಿಕ್ಷಣ ಪಡೆದು ದೇಶ ಅಭಿವೃದ್ಧಿಯಾಗಲು ತನ್ನದೇ ಆದ ಸೇವೆ ನೀಡಿದವರು. ಶಿಕ್ಷಣ ಸಂಸ್ಥೆಗಳು ವ್ಯಾಪಾರಿಕರಣದ ಕೇಂದ್ರವಾಗಿರದೇ ಸೇವಾ ಕೇಂದ್ರವಾಗಿರಬೇಕೆಂದು ಹಳೆಯಂಗಡಿ ಸಿಎಸ್ಐ ಅಮ್ಮನ್ ಮೆಮೋರಿಯಲ್ ಚರ್ಚಿನ ಸಭಾ ಪಾಲಕರಾದ ರೇ.ವಿನಯ್ ಲಾಲ್ ಬಂಗೇರ ಹೇಳಿದರು.

ಅವರು ಹಳೆಯಂಗಡಿ ಸಿಎಸ್ಐ ಚರ್ಚ್ ನಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು

ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಡುಪಿ ಸಿಎಸ್ಐ ಜುಬ್ಬಿಲಿ ಸಭೆಯ ಸುದರ್ಶನ್ ರವರು ದೇವರ ವಾಕ್ಯ ಸಂದೇಶ ನೀಡಿದರು.ಶಿಕ್ಷಕಿ ಪುಷ್ಪಲತಾ ಪಾಲನ್ನ ಮತ್ತು ಶಿಕ್ಷಕಿ ಐರಿನ್ ಕರ್ಕಡ ರವರು ವಾಕ್ಯವನ್ನು ವಾಚಿಸಿದರು.ಸಭೆಯ ಕಾರ್ಯ ವ್ಯಾಪ್ತಿಯಲ್ಲಿರುವ ಎಲ್ಲಾ ಶಿಕ್ಷಕಿಯರನ್ನು ಗೌರವಿಸಲಾಯಿತು.

ಮಹಿಳಾ ಅನ್ಯೋನ್ಯ ಕೂಟದ ಅಧ್ಯಕ್ಷೆ ಹರಿಣಿ ಬಂಗೇರ ಕಾರ್ಯಕ್ರಮ ನಿರೂಪಿಸಿದರು. ಸಭಾ ಪರಿಪಾಲನ ಸಮಿತಿಯ ಕಾರ್ಯದರ್ಶಿ ಲಾವಣ್ಯ ಕೋಟ್ಯಾನ್ ವಂದಿಸಿದರು.ಸಭಾ ಪರಿಪಾಲನ ಸಮಿತಿ ಸದಸ್ಯರುಗಳಾದ ಎಚ್ ವಸಂತ ಬರ್ನಾಡ್, ಜೇಮ್ಸ್ ಕರ್ಕಡ, ಸಿಡ್ನಿ ಕರ್ಕಡ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

05/09/2022 08:08 am

Cinque Terre

1.62 K

Cinque Terre

0

ಸಂಬಂಧಿತ ಸುದ್ದಿ