ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಚಿ:ಕೊಳ್ನಾಡು ಪ್ರೌಢಶಾಲೆಯಲ್ಲಿ ನವೀಕರಿಸಿದ ಸಭಾಭವನ ಉದ್ಘಾಟನೆ

ಬಂಟ್ವಾಳ : ಮಂಚಿ ಕೊಲ್ನಾಡು ಸರಕಾರಿ ಪ್ರೌಢಶಾಲೆಗೆ ಬೆಂಗಳೂರಿನ ಕ್ಯಾಪ್ಸ್ ಫೌಂಡೇಶನ್ ಭಾರತದ 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆ ಪ್ರಯುಕ್ತ ಸಿಎಫ್ ಅಮೃತ ಭಾರತ ಯೋಜನೆಯಡಿ ಸುಮಾರು ರೂ. 5 ಲಕ್ಷ ವೆಚ್ಚದಲ್ಲಿ ನವೀಕರಿಸಿದ ಶಾಲೆಯ ಸಭಾಂಗಣವನ್ನು ಲೋಕಾರ್ಪಣೆಗೊಳಿಸಲಾಯಿತು.

ಈ ಸಂದರ್ಭ ಮಾತನಾಡಿದ ಕ್ಯಾಪ್ಸ್ ಫೌಂಡೇಷನ್ ಸ್ಥಾಪಕಾಧ್ಯಕ್ಷ ಸಿಎಫ್ ಚಂದ್ರಶೇಖರ ಶೆಟ್ಟಿ ಕನ್ನಡ ಮಾಧ್ಯಮದಲ್ಲಿ ಅದರಲ್ಲೂ ಗ್ರಾಮೀಣ ಭಾಗದಲ್ಲಿ ಕಲಿತ ಮಕ್ಕಳು ಉನ್ನತ ವಿದ್ಯಾಭ್ಯಾಸ ಪಡೆಯುವ ಜೊತೆಗೆ ರಾಷ್ಟ್ರಪ್ರೇಮ ಬೆಳೆಸಿಕೊಳ್ಳಬೇಕು. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಪರಿಸರವನ್ನು ಸಂರಕ್ಷಿಸಿ ದೇಶ ಸೇವೆ ಮಾಡಬೇಕು. ಕ್ಯಾಪ್ಸ್ ಫೌಂಡೇಷನ್ ಈಗಾಗಲೇ ಅನೇಕ ಶಾಲೆಗಳಿಗೆ ಅಗತ್ಯ ಕೊಡುಗೆಗಳನ್ನು ನೀಡಿದ್ದು, ಭವ್ಯ ಭಾರಯ ಕಟ್ಟುವ ಕಾಯಕದಲ್ಲಿ ತೊಡಗಿಸಿಕೊಂಡಿದೆ. ಅಬ್ದುಲ್ ಕಲಾಮ್ ವಿವೇಕಾನಂದರಂತಹ ಆದರ್ಶ ವ್ಯಕ್ತಿಗಳಿಂದ ಪ್ರೇರಣೆಯನ್ನು ಪಡೆದು ಒಳಿತನ್ನು ಮಾಡೋಣ ಎಂದು ಹೇಳಿದರು.

ಶಾಲೆಗೆ ಮುನ್ನೂರು ಕುರ್ಚಿಗಳನ್ನು ಕೊಡುಗೆಯಾಗಿ ಕ್ಯಾಪ್ಸ್ ಫೌಂಡೇಷನ್ ವತಿಯಿಂದ ನೀಡಲಾಯಿತು.

ಸರಕಾರಿ ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮೀ ಕಟೀಲು ಸ್ವಾಗತಿಸಿ, ಕೊಡುಗೆ ನೀಡಿದ ಚಂದ್ರಶೇಖರ ಶೆಟ್ಟಿಯವರನ್ನು ಶಾಲಾ ವತಿಯಿಂದ ಗೌರವಿಸಿದರು.

ಸ.ಪ್ರೌ.ಮಂಚಿ ಕೊಳ್ನಾಡಿನ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಪ್ರವೀಣ್ ಕೊಟ್ಟಾರಿ, ಸದಸ್ಯರಾದ ಡಾ.ಗೋಪಾಲಾಚಾರ್ ಮತ್ತಿತರರಿದ್ದರು.ತಾರನಾಥ್ ಕೈರಂಗಳ ನಿರೂಪಿಸಿದರು.ಹಿರಿಯ ಶಿಕ್ಷಕಿ ಶ್ರೀಮತಿ ಶಾಂತಾ ವಂದಿಸಿದರು.

Edited By : PublicNext Desk
Kshetra Samachara

Kshetra Samachara

08/07/2022 07:42 pm

Cinque Terre

1.96 K

Cinque Terre

0

ಸಂಬಂಧಿತ ಸುದ್ದಿ