ಮುಲ್ಕಿ: ಇಲ್ಲಿನ ಮಾನಂಪಾಡಿಸ. ಹಿ. ಪ್ರಾ. ಶಾಲೆಯ ಪ್ರಾಥಮಿಕ ವಿದ್ಯಾರ್ಥಿಗಳಿಗೆ ದಿ. ಸುಖಾನಂದ ಶೆಟ್ಟಿ ಸ್ಮರಣಾರ್ಥಅವರ ಸಹೋದರರಾದ ಸಂತೋಷ್ ಶೆಟ್ಟಿಯವರಿಂದ ಸುಮಾರು 25,000 ಮೌಲ್ಯದ ಪಠ್ಯಪುಸ್ತಕ ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಲಾಯಿತು.
ಈ ಸಂದರ್ಭ ಮುಲ್ಕಿ ನಗರ ಪಂಚಾಯತ್ ನ ಅಧ್ಯಕ್ಷ ಸುಭಾಶ್ ಶೆಟ್ಟಿ, ಉಪಾಧ್ಯಕ್ಷ ಸತೀಶ್ ಅಂಚನ್, ಸದಸ್ಯರಾದ ವಂದನಾ ಕಾಮತ್, ಮಾಜೀ ಅಧ್ಯಕ್ಷ ಸುನಿಲ್ ಆಳ್ವ , ದಾನಿ ಸಂತೋಷ್ ಶೆಟ್ಟಿ, ಸತೀಶ್ ಕೋಟ್ಯಾನ್, ವಿಶ್ವನಾಥ ಭಟ್, ವಿಜಯ್ ಕೋಟ್ಯಾನ್ ಹಾಗೂ ಫೋಷಕರು ,ಶಿಕ್ಷಕರು ಉಪಸ್ಥಿತರಿದ್ದರು.
ಶಿಕ್ಷಕಿ ಶೋಭಾ ಯು ಸ್ವಾಗತಿಸಿ, ಮುಖ್ಯ ಶಿಕ್ಷಕಿ ಅನಿತಾ ಲೀಝಿ ಪಿಂಟೋ ವಂದಿಸಿದರು.
Kshetra Samachara
23/06/2022 03:15 pm