ಮುಲ್ಕಿ: ಮುಲ್ಕಿ ಸಮೀಪದ ತೋಕೂರು ಡಾ.ಎಂ. ರಾಮಣ್ಣ ಶೆಟ್ಟಿ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ
ವಿದ್ಯಾರ್ಥಿಸಂಸತ್ತಿನ ಪದಗ್ರಹಣ ಸಮಾರಂಭ ಹಾಗೂ ವಿದ್ಯಾಸಂಸ್ಥೆಯ ರೂವಾರಿ ಜ. ಕೆ.ಎಸ್ ಹೆಗ್ಡೆಯವರ ಜನ್ಮದಿನವನ್ನು ಆಚರಿಸಲಾಯಿತು.
ಮುಲ್ಕಿ ಪೋಲಿಸ್ ಠಾಣೆಯ ನಿರೀಕ್ಷಕ ಕುಸುಮಾಧರ್ ಕೆ ಮಂತ್ರಿಮಂಡಲದ ವಿದ್ಯಾರ್ಥಿ ಸಂಸತ್ತಿಗೆ ಪ್ರಮಾಣವಚನವನ್ನು ಬೋಧಿಸಿ ಮಾತನಾಡಿ ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೆ ಮೊಬೈಲ್, ಅಂತರ್ಜಾಲಗಳಿಗೆ ಆಕರ್ಷಿತರಾಗದೆ ಸತ್ಪಜೆಯಾಗಿ ಬಾಳಿ ಬದುಕಬೇಕು ಎಂದು ಕಿವಿಮಾತು ಹೇಳಿದರು,ವಿದ್ಯಾರ್ಥಿ ಸಂಸತ್ತಿನ ಮೂಲಕ ಲಭ್ಯವಾದ ಮಂತ್ರಿಸ್ಥಾನವನ್ನು ದಕ್ಷವಾಗಿ ನಿಭಾಯಿಸಿದಲ್ಲಿ ನಾಯಕತ್ವ ಗುಣದೊಂದಿಗೆ ಭವಿಷ್ಯದ ನಾಯಕರಾಗಿ ಮೂಡಿಬರಲು ಸಹಕಾರಿಯಾಗಲಿದೆ ಎಂದರು. ಬಳಿಕ ಮಕ್ಕಳ ಮೇಲೆ ದೌರ್ಜನ್ಯ ಬಗ್ಗೆ ಸಂವಾದ ಕಾರ್ಯಕ್ರಮ ನಡೆದು ಮಕ್ಕಳ ಪ್ರಶ್ನೆಗೆ ಉತ್ತರಿಸಿದರು.
ಶಾಲಾ ಪ್ರಾಂಶುಪಾಲೆ ಶ್ರೀಲತಾರಾವ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಮಾರಂಭದಲ್ಲಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸ್ವರಾಜ್ ಶೆಟ್ಟಿ ,ದೈಹಿಕ ಶಿಕ್ಷಕರಾದ ರೇಷ್ಮಾ ಶ್ರೀಯಾನ್ ಮತ್ತು ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು. ವೈಭವ್ ಸ್ವಾಗತಿಸಿದರು. ಸಮಯ್ ವಂದಿಸಿದರು.ವೈಷ್ಣವಿ ಕಾರ್ಯಕ್ರಮ ನಿರೂಪಿಸಿದರು.
Kshetra Samachara
17/06/2022 03:00 pm