ಬಜಪೆ:ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆಂಜಾರು, ಪೊರ್ಕೋಡಿ ಇದರ ಎಲ್.ಕೆ.ಜಿ ಮತ್ತು ಯು.ಕೆ.ಜಿ 1ನೇ ಮತ್ತು 6ನೇ ತರಗತಿ ಆಂಗ್ಲ ಮಾಧ್ಯಮ ಶಾಲೆಯನ್ನು ಮೂಲ್ಕಿ -ಮೂಡಬಿದ್ರೆ ಶಾಸಕ ಉಮಾನಾಥ್ ಎ ಕೋಟ್ಯಾನ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಕ್ಕಳಿಗೆ ಉಚಿತ ಪಠ್ಯಪುಸ್ತಕ ವಿತರಣೆ, ಉಚಿತ ಸಮವಸ್ತ್ರ ವಿತರಿಸಿದರು. ಶಾಲೆಯಲ್ಲಿ ಗಿಡ ನೆಡುವ ಮೂಲಕ ವನಮಹೋತ್ಸವವನ್ನು ಆಚರಿಸಲಾಯಿತು.
ಈ ಸಂದರ್ಭ ಬಜಪೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಶ್ರೀಮತಿ ವೈ. ಪೂರ್ಣಕಲಾ, ಸ.ಹಿ.ಪ್ರಾಥಮಿಕ ಶಾಲೆ ಕೆಂಜಾರು ಇದರ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ರಾಜೇಶ್ ಅಮೀನ್, ಸ.ಹಿ.ಪ್ರಾಥಮಿಕ ಶಾಲೆ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಧಾಕರ್ ಶೆಟ್ಟಿ, ಎಸ್ ಡಿ ಎಂ ಸಿ ಅಧ್ಯಕ್ಷೆ ಶ್ರೀಮತಿ ಗುಲಾಬಿ, ಮಳವೂರು ಗ್ರಾಮ ಪಂಚಾಯತ್ ಅಧ್ಯಕ್ಷ ಗಣೇಶ್ ಅರ್ಬಿ, ಮಳವೂರು ಗ್ರಾಮ ಪಂಚಾಯತ್ ಸದಸ್ಯ ಅಣ್ಣು ಶೆಟ್ಟಿ , ವನಜಾ ಶೆಟ್ಟಿ, ಕರಂಬಾರು ಕ್ಲಸ್ಟರ್ ನ ಸಿ.ಆರ್.ಪಿ. ಶ್ರೀಮತಿ ಲವಿನ ಕ್ರಾಸ್ತ, ಮಂಗಳೂರು ತಾಲೂಕು ಭೂನ್ಯಾಯ ಮಂಡಳಿಯ ಸದಸ್ಯ ಜಯಂತ್ ಸಾಲ್ಯಾನ್ , ಸ.ಹಿ.ಪ್ರಾಥಮಿಕ ಕೆಂಜಾರು ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಜೊಯ್ಸ್ ಪಿ ಡಿಸೋಜ, ಸಹ ಶಿಕ್ಷಕಿ ಶ್ರೀಮತಿ ರೊಸ್ಲಿನ್, ಸ.ಹಿ.ಪ್ರಾಥಮಿಕ ಶಾಲೆ ಕೆಂಜಾರಿನ ಮಾಜಿ ಮುಖ್ಯ ಶಿಕ್ಷಕಿ ಶ್ರೀಮತಿ ವಿಜಯಲಕ್ಷ್ಮಿ, ಊರಿನ ಪ್ರಮುಖರಾದ ಸುಧಾಕರ್ ಕಾಮತ್, ವಿಜಯ್ ಕುಮಾರ್ ಕೆಂಜಾರು ಕಾನ, ಸತೀಶ್ ದೇವಾಡಿಗ, ಹರೀಶ್ ಪೈ, ಲಕ್ಷ್ಮಣ್ ಬಂಗೇರ, ದಿನೇಶ್ ಶೆಟ್ಟಿ, ನಂದಕುಮಾರ್, ಶ್ರೀಮತಿ ಪ್ರೇಮ ತಾ0ಗಡಿ, ಸಿಂಚನ ಮಹಿಳಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ನಳಿನಿ ಜಿ ಶೆಟ್ಟಿ, ಸ.ಹಿ.ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಸದಸ್ಯ ಪಾವನ, ನವೀನ್ ಶೆಟ್ಟಿ, ಕೀರ್ತಿ ಶೆಟ್ಟಿ, ಪುಷ್ಪರಾಜ ಶೆಟ್ಟಿ ,ಅಶೋಕ್ ಶೆಟ್ಟಿ, ಧನಂಜಯ್, ನಿರಂಜನ್ ಕರ್ಕೇರ ಹಾಗೂ ಪೋಷಕರು, ದಾನಿಗಳು ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು.
Kshetra Samachara
04/06/2022 07:08 pm