ಬಜಪೆ:ಸರ್ಕಾರಿ ಪ್ರೌಢಶಾಲೆ ಬಡಗ ಎಕ್ಕಾರಿನಲ್ಲಿ ಶಾಲಾ ಕೊಠಡಿ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಯನ್ನು ಮೂಲ್ಕಿ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಅವರು ನೆರವೇರಿಸಿದರು.
ಈ ಸಂದರ್ಭ ವರ್ಗಾವಣೆಗೊಂಡ ಶಾಲಾ ಮುಖ್ಯೋಪಾಧ್ಯಾಯ ಉಸ್ಮನ್ ಇವರ ಬೀಳ್ಕೊಡುಗೆ, ಟಿವಿಯನ್ನು ಕೊಡುಗೆ ನೀಡಿದ ಯೋಗೀಶ್ ಕುಲಾಲ್, ಶಾಲಾ ದಾನಿಗಳನ್ನು ಅಭಿನಂದಿಸಲಾಯಿತು. ಅಲ್ಲದೆ ಶಾಲಾ ಅಭಿವೃದ್ಧಿಯಲ್ಲಿ ಕೈಜೋಡಿಸಿರುವ ಊರಿನ ಸಂಸ್ಥೆಗಳಾದ ದುರ್ಗಾ ಕಲ್ಚರಲ್ & ಕ್ರಿಕೆಟ್ ಕ್ಲಬ್, ಹಿಂದೂ ಯುವಸೇನೆ, ವಿಜಯ ಯುವ ಸಂಗಮ ,ನವಜ್ಯೋತಿ ಫ್ರೆಂಡ್ಸ್ ,ಕಾಯ್ದಂಡ ಯುವಕ ಮಂಡಲ ಮುಂತಾದ ಸಂಸ್ಥೆಗಳನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಕಸ್ತೂರಿ ಪಂಜ,ಎಸ್ ಡಿ ಎಂಸಿ ಅಧ್ಯಕ್ಷ ಸುದೀಪ್ ಅಮೀನ್ ,ಎಕ್ಕಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುರೇಖಾ ರೈ,ಗ್ರಾಮ ಪಂಚಾಯತ್ ಸದಸ್ಯರುಗಳಾದ ಪ್ರವೀಣ್ ಆಚಾರ್ಯ ,ವಿಕ್ರಮ್ ಮಾಡ, ಸತೀಶ್ ಶೆಟ್ಟಿ ,ಸುರೇಖಾ ಶೆಟ್ಟಿ, ಅನಿಲ್ ಕುಮಾರ್ ,ಪ್ರಮುಖರಾದ ಪ್ರಕಾಶ್ ಕುಕ್ಯಾನ್, ಆದರ್ಶ ಶೆಟ್ಟಿ ,ಶಾಲೆಯ ಮಾಜಿ ಮುಖ್ಯೋಪಾಧ್ಯಾಯ ಉಸ್ಮಾನ್, ಸುಶೀಲ್ ಕುಮಾರ್ ,ರಂಜಿತ್ ಕರ್ಕೇರ ,ನಾಗೇಂದ್ರರಾವ್ ,ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಇಂದಿರಾಭಟ್, ಎಂ ಅರ್ ಪಿ ಎಲ್ ನ ಶ್ರೀಶಾ, ಎಸ್ ಡಿಎಂ ಸಿ ಸದಸ್ಯರು,ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ,ಸಹ ಶಿಕ್ಷಕಿಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
01/06/2022 10:09 am